ನವದೆಹಲಿ :ಚೀನಾದ ವಾಯು ಸೇನೆಯ ವಿಮಾನವೊಂದು ಜೂನ್ ಕೊನೆಯ ವಾರದಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಪೂರ್ವ ಲಡಾಖ್‍ನ ವಿವಾದಿತ ಪ್ರದೇಶದ ತೀರಾ ಸನಿಹದಲ್ಲಿ ಹಾರಾಟ ನಡೆಸಿತ್ತು ಹಾಗೂ ನಿಗದಿತ ಪ್ರಕ್ರಿಯೆಗಳಂತೆ ಭಾರತೀಯ ವಾಯುಸೇನೆ ಸೂಕ್ತ ಕ್ರಮಕೈಗೊಂಡಿದೆ ಎಂದು ತಿಳಿದು ಬಂದಿದೆ.

ಜೂನ್ ಕೊನೆಯ ವಾರದ ಒಂದು ದಿನ ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದ್ದು ಭಾರತೀಯ ಸೇನಾ ಸಿಬ್ಬಂದಿ ಇದನ್ನು ಗಮನಿಸಿದ್ದರು ಅಲ್ಲಿದ್ದ ರಾಡಾರ್‍ಗಳೂ ಈ ವಿಮಾನವನ್ನು ಪತ್ತೆ ಹಚ್ಚಿದ್ದವು. ವಾಯು ಮಾರ್ಗ ಉಲ್ಲಂಘನೆಯಾಗಿರುವುದು ತಿಳಿಯುತ್ತಿದ್ದಂತೆಯೇ ನಿಯಮಾನುಸಾರ ಭಾರತೀಯ ವಾಯುಸೇನೆ ಸನ್ನದ್ಧವಾಯಿತು ಎಂದು ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್ ಸೆಕ್ಟರ್ ಸಮೀಪದದ ಗಡಿ ಪ್ರದೇಶಗಳಿಗೆ ಸನಿಹದಲ್ಲಿ ಚೀನಾ ಸೇನೆಯು ತನ್ನ ಯುದ್ಧ ವಿಮಾನಗಳು ಹಾಗೂ ಇತರ ವಾಯು ಸೇನೆ ಬಳಸುವ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಕವಾಯತು ನಡೆಸುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.
ಭಾರತದ ಭೂಪ್ರದೇಶದ ಸನಿಹದಲ್ಲಿ ಚೀನಾದ ಬಳಿ ದೊಡ್ಡ ಸಂಖ್ಯೆಯ ಯುದ್ಧ ವಿಮಾನಗಳು ಹಾಗೂ ಮಾನವರಹಿತ ವಿಮಾನಗಳೂ ಇವೆ ಎಂದು ತಿಳಿದು ಬಂದಿದೆ. ಚೀನಾದ ಯುದ್ಧ ವಿಮಾನ ಭಾರತದ ಭೂಪ್ರದೇಶದ ಸಮೀಪ ಬಂದಿರುವ ವಿಚಾರವನ್ನು ಚೀನಾದ ಸಂಬಂಧಿತರಿಗೆ ತಿಳಿಸಲಾಗಿದೆ ಎಂದು ಹೇಳಲಾಗಿದೆ.
ಇದೊಂದು ಗಂಭೀರ ವಿಚಾರವಲ್ಲದೇ ಇದ್ದರೂ ಇಂತಹ ಘಟನೆಗಳು ಮುಂದೆ ನಡೆಯದೇ ಇರುವಂತೆ ಹಾಗೂ ಇಂತಹುದೇ ಘಟನೆಗಳು ಮುಂದೆ ದೊಡ್ಡ ಗಂಭೀರ ಮಟ್ಟಕ್ಕೆ ತಿರುಗುವುದನ್ನು ತಡೆಯುವ ಅಗತ್ಯವಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯ ಪಡುತ್ತಾರೆ.
ಭಾರತ ಮತ್ತು ಚೀನಾ ನಡುವೆ 2020ರಿಂದ ಸಂಘರ್ಷವೇರ್ಪಟ್ಟಿರುವ ಸ್ಥಳಕ್ಕೆ ತೀರಾ ಸನಿಹದಲ್ಲಿ ಚೀನಾದ ಯುದ್ಧ ವಿಮಾನ ಹಾರಾಟ ನಡೆಸಿದೆಯೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಭೂಸೇನೆ ಮತ್ತು ವಾಯುಸೇನೆ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿವೆ.