ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅನ್ನಛತ್ರ ನಿರ್ಮಾಣಕ್ಕಾಗಿ ಹಮ್ಮಿಕೊಂಡ ಲಕ್ಕಿಡಿಪ್ ಡ್ರಾ ನಡೆಯಿತು. ಶ್ರೀ ಮಂದಿರದಲ್ಲಿ ನಡೆದ ಅದೃಷ್ಟಚೀಟಿ ಎತ್ತುವಿಕೆಯಲ್ಲಿ ನೀರ್ಚಾಲು ರಾಮ ಎಂಬವರು ಬಂಪರ್ ಬಹುಮಾನಕ್ಕೆ ಪಾತ್ರರಾದರು. ಇತರ 10 ಆಕರ್ಷಕ ಬಹುಮಾನಗಳ ವಿಜೇತರನ್ನೂ ಇದೇ ಸಂದರ್ಭದಲ್ಲಿ ಅದೃಷ್ಟಚೀಟಿಯ ಮೂಲಕ ಆರಿಸಲಾಯಿತು.
ಸೇವಾಸಮಿತಿಯ ಅಧ್ಯಕ್ಷ ಉದಯ ಕುಮಾರ್ ಮೈಕುರಿ ವಿಜೇತರಿಗೆ ಲಭಿಸಿದ ಬಂಪರ್ ಬಹುಮಾನವಾದ ಸ್ಕೂಟರ್‍ನ್ನು ಹಸ್ತಾಂತರಿಸಿದರು. ಕಾರ್ಯದರ್ಶಿ ಕೃಷ್ಣ ನಾಯ್ಕ ಮಲ್ಲಡ್ಕ, ಗುರುಸ್ವಾಮಿ ರಮೇಶ ಬೇಳ, ಕಾರ್ಯದರ್ಶಿ ರವಿಚಂದ್ರ ಓಣಿಯಡ್ಕ, ಬಾಲಕೃಷ್ಣ ನಾಯ್ಕ ನೀರ್ಚಾಲು, ಸುರೇಶ ನೀರ್ಚಾಲು, ಜೊತೆಕಾರ್ಯದರ್ಶಿ ಮಹೇಶ ಓಣಿಯಡ್ಕ, ಸದಸ್ಯ ಬಾಲಕೃಷ್ಣ ದೊಡ್ಡಮೂಲೆ, ಕೃಷ್ಣ ನಾಯ್ಕ ಓಣಿಯಡ್ಕ, ಸುಧಾಮ ಮಾಸ್ತರ್, ರವಿ ಮಾಸ್ತರ್, ಗಣೇಶಕೃಷ್ಣ ಅಳಕ್ಕೆ, ಗಂಗಾಧರ ಓಣಿಯಡ್ಕ, ನಾರಾಯಣ ನಾಯ್ಕ ನೈಕುರಿ, ಧರ್ಮಶಾಸ್ತಾ ಮಿತ್ರಮಂಡಳಿ, ಮಾತೃಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.