ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿಯಲ್ಲಿ ನೈರ್ಮಲ್ಯ ತ್ಯಾಜ್ಯ ನಿರ್ವಹಣೆಗೆ ಅಗತ್ಯವಿರುವ ತ್ಯಾಜ್ಯ ವಸ್ತುಗಳನ್ನು ತಿರುಗಿಸಿ ಮರುಬಳಕೆ ಕೇಂದ್ರಕ್ಕೆ ರವಾನಿಸಲು ವಸ್ತು ಸಂಗ್ರಹಣಾ ಸೌಲಭ್ಯ (ಎಂಸಿಎಫ್) ಕಟ್ಟಡವನ್ನು ಉದ್ಘಾಟಿಸಲಾಯಿತು.
ಕಟ್ಟಡವನ್ನು ಶಾಸಕ ಎನ್.ಎ.ನೆಲ್ಲಿಕುನ್ ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸೊವಳಿಕೆ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕ ಸನಲ್ ಗೋಪಾಲ್ ವರದಿ ಮಂಡಿಸಿದರು. ಸ್ವಚ್ಛತಾ ಮಿಷನ್ ಜಿಲ್ಲಾ ಸಹಾಯಕ ಸಂಯೋಜಕ ರಿಯಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ಅಭಿವೃದ್ಧಿ ವಿಷಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಅಬ್ದುಲ್ ರಜಾಕ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಖದೀಜಾ, ಸದಸ್ಯರಾದ ಮುಮ್ತಾಜ್, ಕೃಷ್ಣ ಶರ್ಮಾ, ಸುಹಾರಾ, ಸುಂದರ ಮವ್ವಾರು, ಎಂ.ಮೀನಾಕ್ಷಿ, ಪಿ.ಆಯಿಷತ್ ಮಾಶಿದ, ಸಿ.ಡಿ. ಎಸ್ ಅಧ್ಯಕ್ಷೆ ರೋಶಿನಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಅಲಿ ತುಪ್ಪಕಲ್, ಜಾನಿ ಕ್ರಾಸ್ತಾ, ಪ್ರಕಾಶ್ ಕುಂಬ್ಡಾಜೆ, ಜಯಪ್ರಕಾಶ್ ರೈ, ನಾರಾಯಣನ್ ನಂಬಿಯಾರ್, ಎಸ್ ಮೊಹಮ್ಮದ್ ಕುಂಞÂ್ಞ, .ಟಿ ಅಬ್ದುಲ್ಲ ಕುಂಞÂ್ಞ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ. ಹರೀಶ್ ಸ್ವಾಗತಿಸಿ, ವಿಇಒ ಅಬ್ದುಲ್ಲಾ ವಂದಿಸಿದರು.