ನವದೆಹಲಿ: ರಕ್ಷಣಾ ಸಚಿವಾಲಯವು ಗುರುವಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮೂರು ಖಾಸಗಿ ವಲಯದ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಗೆ ಸಾಲ ಪತ್ರಗಳನ್ನು ನೀಡಲು ಮತ್ತು ಸಚಿವಾಲಯವು ಮಾಡಿದ ಸಾಗರೋತ್ತರ ಖರೀದಿಗಳಿಗೆ ಸಂಬಂಧಿಸಿದಂತೆ ನೇರ ಬ್ಯಾಂಕ್ ವರ್ಗಾವಣೆಗೆ ಅನುಮತಿ ನೀಡಿದೆ.
ಈ ಮೂರು ಬ್ಯಾಂಕ್‌ಗಳೊಂದಿಗೆ ಇತ್ತೀಚೆಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದುವರೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮಾತ್ರ ಈ ಸೇವೆ ನೀಡುತ್ತಿದ್ದವು. ಈಗ ಮೊದಲ ಬಾರಿಗೆ, ಮೂರು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ರಕ್ಷಣಾ ಸಚಿವಾಲಯವು ವಿದೇಶಿ ಖರೀದಿಗಳಿಗೆ ಹಣಕಾಸು ಸೇವೆಗಳನ್ನು ಒದಗಿಸಲು ಅನುಮತಿ ನೀಡಿದೆ.
ಆಯ್ದ ಬ್ಯಾಂಕ್‌ಗಳು ಒಂದು ವರ್ಷದ ಅವಧಿಗೆ(ಬಂಡವಾಳ ಮತ್ತು ಆದಾಯ ಎರಡರ ಅಡಿಯಲ್ಲಿ ಪ್ರತಿ ಬ್ಯಾಂಕ್‌ಗೆ 666 ಕೋಟಿ ರೂ) ಬಂಡವಾಳ ಮತ್ತು ಆದಾಯದ ಕಡೆಯಿಂದ 2000 ಕೋಟಿ ಮೌಲ್ಯದ ಸಾಲ ಪತ್ರಗಳನ್ನು ಏಕಕಾಲೀನ ಆಧಾರದ ಮೇಲೆ ವಿತರಿಸಲು ಅನುಮತಿ ನೀಡಬಹುದು. ಅಗತ್ಯ ಬಿದ್ದರೆ ಮುಂದಿನ ಕ್ರಮ ಕೈಗೊಳ್ಳಲು ಈ ಬ್ಯಾಂಕ್‌ಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.