HEALTH TIPS

ಸರ್ ಎಂ. ವಿಶ್ವೇಶ್ವರಯ್ಯ ಮೊಮ್ಮಗಳು ಶೀಲಾ ಮೋಹನ್ ಯುಎಸ್ ಸಿಟಿ ಕೌನ್ಸಿಲ್ ಚುನಾವಣೆಗೆ ಸ್ಪರ್ಧೆ

             ಬೆಂಗಳೂರು: ಅಮೆರಿಕದ ಸಿಟಿ ಕೌನ್ಸಿಲ್ ಚುನಾವಣೆಗೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಮೊಮ್ಮಗಳಾಗಿರುವ ಶೀಲಾ ಮೋಹನ್ ಸ್ಪರ್ಧಿಸಲಿದ್ದಾರೆ.

                  ಬೆಂಗಳೂನಲ್ಲಿ ಜನಿಸಿದ ಶೀಲಾ ಮೋಹನ್, ಆಪಲ್ ಸಂಸ್ಥೆಯ ಕೇಂದ್ರ ಕಚೇರಿಯಿರುವ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋ ನಗರದಿಂದ ಚುನಾವಣೆ ಎದುರಿಸಲು ನಿರ್ಧರಿಸಿದ್ದಾರೆ. 

                 60,000 ಮಂದಿ ವಾಸಿಸುವ ನಗರ ಇದಾಗಿದ್ದು, 2022 ರ ನವೆಂಬರ್ ನಲ್ಲಿ ಚುನಾವಣೆ ನಡೆಯಲಿದೆ. 

                  ಚುನಾವಣೆಗೆ ತಯಾರಾಗುತ್ತಿರುವ ಶೀಲಾ ಮೋಹನ್, ಆರ್ಥಿಕ ಪಾರದರ್ಶಕತೆ,  ತನ್ನ ಮತದಾರರ ಅಗತ್ಯತೆಗಳ ಬಗ್ಗೆ ಸ್ಪಷ್ಟತೆ ಹೊಂದಿದ್ದು, ಎಲ್ಲರಿಗೂ ಸುಸ್ಥಿರ ವಸತಿ, ಇತರ ಪ್ರಾದೇಶಿಕ ಏಜೆನ್ಸಿಗಳೊಂದಿಗೆ ಪಾಲುದಾರಿಕೆ, ಹೆಚ್ಚಿನ ಸಮುದಾಯ ಭಾಗವಹಿಸುವಿಕೆ. ಸೇರಿದಂತೆ ತನ್ನ ಮತದಾರರಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಅರಿವು ಹೊಂದಿದ್ದಾರೆ.

               ಶೀಲಾ ಅವರು ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದು, ಆಕೆಯ ಸಹೋದರ ಸತೀಶ್ ಅವರು ಮ್ಯೂಸಿಯಂ ರಸ್ತೆಯಲ್ಲಿರುವ ಸರ್ ಎಂ.ವಿ ಅವರು ತಮ್ಮ ಕುಟುಂಬ ಸದಸ್ಯರಿಗಾಗಿ ಆಯ್ಕೆ ಮಾಡಿದ್ದ ಹಳೆಯ ಬಂಗಲೆಯಲ್ಲಿ ವಾಸವಿದ್ದಾರೆ.

               ಶೀಲಾ ಹಾಗೂ ಸತೀಶ್ ತಮ್ಮ ಅಜ್ಜ (ಸರ್.ಎಂವಿ) ಅವರ ನೆರಳಿನಲ್ಲಿ ಬೆಳೆದಿದ್ದು, ಜುಲೈ ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಶೀಲಾ ಮೋಹನ್ ಅವರು ಸರ್ ಎಂವಿ ನೆಹರೂ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೊ ಹಿಡಿದು, ಗತಕಾಲದ ನೆನಪುಗಳನ್ನು ಮೆಲುಕು ಹಾಕಿದರು.

                "ನನ್ನ ತಾತ ಮುದ್ದೇನಹಳ್ಳಿಯ ಗ್ರಾಮದಲ್ಲಿ ಅತ್ಯಂತ ಸವಾಲಿನ ಜೀವನ ಹೊಂದಿದ್ದರು.ದೀಪದ ಕೆಳಗೆ ಕುಳಿತು ಓದಿ ಮುಂದೆ ಬಂದರು. ಅತ್ಯಂತ ಶಿಸ್ತುಬದ್ಧ, ನಿಯಂತ್ರಿತ ಮತ್ತು ಕಠಿಣ ಜೀವನವನ್ನು ನಡೆಸಿದರು ಮತ್ತು ಸಮಯಕ್ಕೆ ಹೆಚ್ಚಿನ ಬೆಲೆ ನೀಡುತ್ತಿದ್ದರು ಎಂದು ಶೀಲಾ ಮೋಹನ್ ಸರ್ ಎಂವಿ ಅವರನ್ನು ಸ್ಮರಿಸಿದ್ದಾರೆ.

              ಕುಟುಂಬಕ್ಕೆ ಹೆಚ್ಚಿನ ಬೆಲೆಯನ್ನು ನೀಡುತ್ತಿದ್ದ ಸರ್ ಎಂವಿ ನನ್ನ ಪೋಷಕರೊಂದಿಗೆ ಊಟ ಮಾಡುತ್ತಿದ್ದರು ಹಾಗೂ ಮನೆಯನ್ನಷ್ಟೇ ನೋಡಿಕೊಳ್ಳುವುದರ ಜೊತೆಗೆ ಪೋಷಕರೊಂದಿಗೆ ಸಮಯ ಕಳೆಯುವುದು, ಸ್ನೇಹಿತರನ್ನು ಭೇಟಿ ಮಾಡುವುದಕ್ಕೂ ನನ್ನ ತಾಯಿಗೆ ಹೇಳುತ್ತಿದ್ದರು, ಇನ್ಫಾಂಟ್ರಿ ರಸ್ತೆಯಲ್ಲಿರುವ ಲೇಡೀಸ್ ಕ್ಲಬ್ ನ್ನು ಅವರು ಪ್ರಾರಂಭಿಸಿದರು ಎನ್ನುತ್ತಾರೆ ಶೀಲ.

              ಸರ್ ಎಂ ವಿಶ್ವೇಶ್ವರಯ್ಯ ಟವರ್ಸ್ ಈಗ ಕಾಣುವ ಪ್ರದೇಶದಲ್ಲಿರುವ ಕಬ್ಬನ್ ರಸ್ತೆಯ ನಂ.5 ರಲ್ಲಿ ಸರ್ ಎಂ.ವಿ ವಾಸವಿದ್ದರು. ಈ ಬಂಗಲೆ ಸರ್ಕಾರಕ್ಕೆ ಸೇರಿತ್ತು ಹಾಗೂ ತಾತ ಮಾಸಿಕ ಬಾಡಿಗೆ ನೀಡುತ್ತಿದ್ದರು. ಈ ಮನೆಯನ್ನು ನನ್ನ ತಂದೆಗೆ ಅವರು 1955 ರಲ್ಲಿ ಆಯ್ಕೆ ಮಾಡಿದ್ದರು. ಆದರೆ ಅವರು ಇಲ್ಲಿ ಇರಲಿಲ್ಲ ಎನ್ನುವುದನ್ನು ಶೀಲಾ ನೆನಪಿಸಿಕೊಂಡಿದ್ದಾರೆ

              ತಮ್ಮ ರಾಜಕೀಯ ಜೀವನದ ಬಗ್ಗೆಯೂ ಶೀಲಾ ಮೋಹನ್ ಮಾತನಾಡಿದ್ದು, ಅಮೆರಿಕಾದಲ್ಲಿ ನಾನು ವಲಸಿಗಳಾಗಿದ್ದರೂ ಅಮೆರಿಕನ್ನರಿಂದ ಅತ್ಯಂತ ವಾತ್ಸಲ್ಯ ಪಡೆದಿದ್ದೇನೆ. ಅಮೆರಿಕ ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವ ದೇಶವಾಗಿದೆ.

               ಭಾರತದಿಂದ ನನ್ನನ್ನು ಆಕರ್ಷಿಸಿದಂತೆ, ಚೀನಾ, ಜಪಾನ್ ನಿಂದಲೂ ಹಲವು ವಲಸಿಗರನ್ನು ಕ್ಯುಪರ್ಟಿನೋ ಆಕರ್ಷಿಸಿದೆ. ನಾವು ಅಲ್ಲಿ ಒಂದು ಸಮುದಾಯದಂತೆ ಜೀವಿಸುತ್ತಿದ್ದೇವೆ. ನಮ್ಮ ರಸ್ತೆಯಲ್ಲಿ ಕೆಲವು ಮಂದಿ ಕನ್ನಡಿಗರೂ ಇದ್ದಾರೆ ಎನ್ನುತ್ತಾರೆ  ಶೀಲಾ ಮೋಹನ್.

                  ಶೀಲಾ ಅವರು ಕಳೆದ 30 ವರ್ಷಗಳಿಂದ ಅಮೆರಿಕಾ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದು, ರಾಜಕೀಯ ಪ್ರವೇಶಿಸಿವುದು ನಿಚ್ಚಳವಾಗಿತ್ತು. ಅಮೆರಿಕಾದಲ್ಲಿ ಸಿಟಿ ಕೌನ್ಸಿಲ್ ಅತ್ಯಂತ ದೊಡ್ಡ ನೀತಿ ನಿರೂಪಣಾ ಸಂಸ್ಥೆಯಾಗಿದ್ದು, ಜನತೆಗೆ ನಾವು ಹೊಸ ಅವಕಾಶಗಳನ್ನು ಜನರಿಗೆ ನೀಡಬೇಕು. ಎಲ್ಲರಿಗೂ ಸುಸ್ಥಿರ ವಸತಿ, ಇತರ ಪ್ರಾದೇಶಿಕ ಏಜೆನ್ಸಿಗಳೊಂದಿಗೆ ಪಾಲುದಾರಿಕೆ, ಹೆಚ್ಚಿನ ಸಮುದಾಯ ಭಾಗವಹಿಸುವಿಕೆ ಸೇರಿದಂತೆ ಹಲವು ಯೋಜನೆಗಳಿವೆ ಎನ್ನುತ್ತಾರೆ  ಶೀಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries