HEALTH TIPS

ಸ್ವದೇಶಿ ನಿರ್ಮಿತ ಮಾನವ ರಹಿತ ವಿಮಾನ ಪರೀಕ್ಷಾರ್ಥ ಯಶಸ್ವಿ: ಡಿಆರ್​ಡಿಒಗೆ ಶ್ಲಾಘನೆ

            ಬೆಂಗಳೂರು: ಸ್ವದೇಶಿ ನಿರ್ಮಿತ ಮಾನವ ರಹಿತ ವಿಮಾನದ ಪರೀಕ್ಷಾರ್ಥ ಯಶಸ್ವಿಯಾಗಿದ್ದು, ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ತಮ್ಮ ಟ್ವಿಟ್ಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಾನವ ರಹಿತ ವಿಮಾನವನ್ನು ತಯಾರಿಸಿದ್ದು, ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದಿದ್ದಾರೆ.

              ಚಿತ್ರದುರ್ಗದಲ್ಲಿ ಶುಕ್ರವಾರ (ಜೂನ್​ 1) ಇದರ ಪರೀಕ್ಷಾರ್ಥ ಪ್ರಯೋಗ ಮುಗಿದಿದ್ದು, ಭಾರತೀಯ ರಕ್ಷಣಾ ಪಡೆಗೆ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಎಂದು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಮಾನವ ರಹಿತ ವಿಮಾನ ಪರೀಕ್ಷಾರ್ಥ ಯಶಸ್ವಿಗಾಗಿ ಡಿಆರ್​ಡಿಒ ವನ್ನು ಅಭಿನಂದಿಸಿದ್ದಾರೆ. ಇದು ಸ್ವಾಯತ್ತ ವಿಮಾನದ ಪ್ರಮುಖ ಸಾಧನೆಯಾಗಿದ್ದು, ಮಿಲಿಟರಿ ವ್ಯವಸ್ಥೆಗಳಲ್ಲಿ ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.

            ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಡಿಆರ್​ಡಿಒ ಅಧ್ಯಕ್ಷ ಡಾ.ಜಿ.ಸತೀಶ್​ ರೆಡ್ಡಿ ಅವರು ವಿಮಾನದ ವಿನ್ಯಾಸ, ಅಭಿವೃದ್ಧಿ ಮತ್ತು ಪರೀಕ್ಷಾರ್ಥ ಯಶಸ್ವಿಗಾಗಿ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.

              ಏನಿದರ ವಿಶೇಷತೆ: ಸ್ವಯಂಚಾಲಿತ, ಚಾಲಕ ರಹಿತ ವಿಮಾನ ಇದಾಗಿದ್ದು, ಟೇಕ್​ ಆಫ್​ ನಿಂದ ಹಿಡಿದು ನ್ಯಾವಿಗೇಷನ್​ ಮೂಲಕ ಪರಿಪೂರ್ಣ ಹಾರಾಟವನ್ನು ಮಾಡಲಿದೆ. ಭವಿಷ್ಯದಲ್ಲಿ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ಪಾತ್ರ ವಹಿಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries