ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ್ ಕಿಞ್ಞಣ್ಣ ರೈ ವಾಚನಾಲಯದ ಆಶ್ರಯದಲ್ಲಿ ವಾಚನಾಲಯದ ಸದಸ್ಯರ ಮಕ್ಕಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಚಂದ್ರನ್ ಮೊಟ್ಟಮ್ಮಲ್ ಅಧ್ಯಕ್ಷತೆಯಲಿಲ್ನಡೆದ ಸಮಾರಂಭದಲ್ಲಿ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ಸದಸ್ಯ ಕೆ.ವಿ.ಸಜೇಶ್ ವಿದ್ಯಾಥಿಗಳಿಗೆ ಪುರಸ್ಕಾರ ನೀಡಿದರು. ಕೆ.ಕೆ.ಮೋಹನನ್, ರಾಮಚಂದ್ರನ್ ಮಾಸ್ತರ್, ಕೆ.ಗೋವಿಂದನ್, ಎಂ.ಪದ್ಮನಾಭನ್, ಸಾಕ್ಷರತಾ ಪ್ರೇರಕಿ ಮಾಲತಿ ಶೇಖರ್, ರಂಜಿತ್ ನಾವುಂಗಾಲ್ ಮಾತನಾಡಿದರು. ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ದೇವಿಕಾ ಮೋಹನ್ ಕೆ.ಕೆ, ದೀಪಿಕಾ ಮೋಹನ್ ಕೆ.ಕೆ, ಪೂರ್ಣೇಶ್ ರೈ ವೈ, ಅಖಿತೇಷ್ ಬಿ.ಕೆ, ಅನಘಾ ಆರ್.ಪಿ, ಪ್ಲಸ್ ಟುವಲ್ಲಿ ಸಾಧನೆಗೈದ ಅತುಲ್ ಕೃಷ್ಣ ಜೆ, ಸಂಧ್ಯಾ ಎಂ., ಕ್ಷಮಾ ವಿ.ಆರ್, ಅನನ್ಯಾ ಸಿ, ಶ್ರಾವ್ಯಾ ಎಸ್ ಎಂ, ಆದಿರಾ ಅಶೋಕ್ ವಿ.ಸಿ ಎಂಬವರನ್ನು ಗೌರವಿಸಲಾಯಿತು.
ಮುಳ್ಳೇರಿಯದಲ್ಲಿ ವಾಚನಾಲದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ
0
ಜುಲೈ 26, 2022