ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೆಡಿಸೆಪ್ ಉದ್ಘಾಟನಾ ಸಮಾರಂಭದಲಲಿ ಚೆಂಡೆ ವಾದನದ ಸದ್ದು ಕೇಳಿ ಕುಪಿತರಾಗಿ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ ಘಟನೆ ನಡೆದಿದೆ. ಬಳಿಕ ಚೆಂಡೆ ವಾದನ ಮುಗಿದ ಬಳಿಕ ಮುಖ್ಯಮಂತ್ರಿಗಳು ಮತ್ತೆ ಭಾಷಣ ಮುಂದುವರಿಸಿದರು.
ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಅವಲಂಬಿತರಿಗೆ ಸಮಗ್ರ ಆರೋಗ್ಯ ವಿಮಾ ಯೋಜನೆಯಾದ ಮೆಡಿಸೆಪ್ ನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಉದ್ಘಾಟನಾ ಭಾಷಣದ ವೇಳೆ ಹೊರಗಡೆ ನಡೆದ ಚೆಂಡೆವಾದನದಿಂದ ಅವರು ವಿಚಲಿತರಾದರು. ಗದ್ದಲ ಹೆಚ್ಚಾದಂತೆ ಮುಖ್ಯಮಂತ್ರಿ ಸಿಟ್ಟಿಗೆದ್ದರು. ನಂತರ ಭಾಷಣ ನಿಲ್ಲಿಸಿದರು. ಧ್ವನಿ ನಿಂತಾಗ ಮತ್ತೆ ಮಾತು ಮುಂದುವರಿಸಿದರು. ಮುಖ್ಯಮಂತ್ರಿಯೂ ಈ ಬಗ್ಗೆ ಈಗ ಏನನ್ನೂ ಹೇಳುವುದಿಲ್ಲ ಎಂದು ಅವರು ತಿಳಿಸಿದರು.
ಮೆಡಿಸೆಪ್ ಯೋಜನೆ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುವವರನ್ನು ಜನ ತಿರಸ್ಕರಿಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು. ಮೆಡಿಸೆಪ್ ನಾಗರಿಕ ಸೇವೆಯ ಸುವರ್ಣಾಕ್ಷರಗಳಲ್ಲಿ ಬರೆಯಬಹುದಾದ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅರ್ಧ ಲಕ್ಷ ತಾತ್ಕಾಲಿಕ ಉದ್ಯೋಗಿಗಳು ಮೆಡಿಸೆಪ್ ಪ್ರಯೋಜನಗಳನ್ನು ಪಡೆಯುತ್ತಾರೆ. ರಾಜ್ಯದಲ್ಲಿ 300 ಆಸ್ಪತ್ರೆಗಳನ್ನು ಎಂಪನೆಲ್ ಮಾಡಲಾಗಿದೆ. ರಾಜ್ಯದ ಹೊರಗಿರುವ 15 ಆಸ್ಪತ್ರೆಗಳಲ್ಲಿಯೂ ಮೆಡಿಸೆಪ್ ಲಭ್ಯವಾಗಲಿದೆ ಎಂದಿರುವರು.