ಕೊಚ್ಚಿನ್: ಮಧ್ಯರಾತ್ರಿಯಲ್ಲಿ ಮಾಲ್ನಲ್ಲಿ ಸಾವಿರಾರು ಜನರನ್ನು ಕಂಡು ಸ್ವತಃ ಸಿಬ್ಬಂದಿಯೇ ಶಾಕ್ ಆಗಿದ್ದಾರೆ. ರಾತ್ರಿ 11.50ರ ನಂತರ ಮಾಲ್ ಬಾಗಿಲ ಮುಂದೆ ಜನರು ಜಮಾಯಿಸಿದ್ದಾರೆ. ಸಿಬ್ಬಂದಿ ಬಾಗಿಲು ತೆಗೆದ ಕೂಡಲೇ ಗುಂಪು ಗುಂಪಾಗಿ ಒಳನುಗ್ಗಿದ್ದಾರೆ.

ಅರೇ… ಏನಿದು ಇಷ್ಟು ಜನರು ಮಧ್ಯರಾತ್ರಿ ಏಕೆ ಮಾಲ್ಗೆ ಬಂದಿದ್ದಾರೆ. ಅಷ್ಟಕ್ಕೂ ಅಷ್ಟು ಆತುರವಾದರೂ ಏನಿತ್ತು ಎಂಬುದಕ್ಕೆ ಇಲ್ಲಿದೆ ಉತ್ತರ. ಮಾಲ್ ಮಾಡಿದ ಈ ಒಂದೇ ಯೋಜನೆಗೆ ಸಾವಿರಾರು ಗ್ರಾಹಕರನ್ನು ಪಡೆದು ಲಾಭ ಮಾಡಿಕೊಂಡಿದ್ದಂತೂ ಸತ್ಯ.
ಅಂದಹಾಗೆ ಜುಲೈ 7 ರಂದು ಈ ಘಟನೆ ನಡೆದಿದೆ. ಜುಲೈ 6 ರ ರಾತ್ರಿ 11.59ಕ್ಕೆ ಮಾಲ್ನಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿತ್ತು. ಈ ರಿಯಾಯಿತಿ ಕೇವಲ ಒಂದು ರಾತ್ರಿಯವರೆಗೆ ಮಾತ್ರ ಅವಕಾಶ ನೀಡಿತ್ತು. ಇದೇ ಕಾರಣಕ್ಕೆ ರಾತ್ರೋ ರಾತ್ರಿ ಮಾಲ್ಗೆ ಪ್ರವಾಹದ ರೀತಿಯಲ್ಲಿ ಜನರು ಜಮಾಯಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಕೊಚ್ಚಿನ್ ಹಾಗೂ ತಿರುವನಂತಪುರಂನಲ್ಲಿರುವ ಎರಡೂ ಮಾಲ್ನಲ್ಲೂ ಸಾವಿರಾರು ಜನರು ಸೇರಿದ್ದರು.