ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯಲ್ಲಿ ಸೋರಿಕೆ ಕಂಡುಬಂದಿದೆ. ದೇಗುಲದ ಚಿನ್ನದ ಹೊದಿಕೆಯ ಭಾಗದಲ್ಲಿ ಸೋರಿಕೆ ಕಂಡುಬಂದಿದೆ. ಚಿನ್ನದ ಪದರಗಳ ಮೂಲಕ ಹರಿದು ಬರುವ ನೀರು ಗರ್ಭಗುಡಿಯನ್ನು ತಲುಪಿ ಕೆಳಗೆ ಹರಿದು ಮುಖಮಂಟಪದಲ್ಲಿರುವ ದ್ವಾರಪಾಲಕ ಶಿಲ್ಪಗಳ ಮೇಲೆ ಬೀಳುತ್ತದೆ.
ಕಳೆದ ವಿಷು ಪೂಜೆ ವೇಳೆ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ವಾರಿಯರ್ ಅವರು ದೇವಸ್ವಂ ಮಂಡಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರಾಯೋಜಕರನ್ನು ಹೊರಗಿಟ್ಟು ನೇರವಾಗಿ ದೇವಸ್ವಂ ಮಂಡಳಿಯೇ ದುರಸ್ತಿ ಮಾಡಬೇಕು ಎಂದು ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ಸೂಚಿಸಿದರು.ನಂತರ ಏಪ್ರಿಲ್ ನಲ್ಲಿ ಮೂರು ತಿಂಗಳೊಳಗೆ ದುರಸ್ತಿ ಪೂರ್ಣಗೊಳಿಸಲು ದೇವಸ್ವಂ ಮಂಡಲಿ ಮಂಜೂರಾತಿ ಪಡೆದರು.
ತಿರುವನಂತಪುರಂ ಆಯುಕ್ತ ಜಿ.ಬೈಜು ಅವರು ಒಂದು ತಿಂಗಳ ಹಿಂದೆ ದೇವಸ್ವಂ ಮಂಡಳಿಗೆ ವರದಿಯನ್ನೂ ಸಲ್ಲಿಸಿದ್ದು, ದೇಗುಲ ಸೋರಿಕೆಯನ್ನು ಪರಿಶೀಲಿಸಲು ತಜ್ಞರನ್ನು ಕರೆತರಬೇಕು ಮತ್ತು ಇದಕ್ಕಾಗಿ ಹೈಕೋರ್ಟ್‍ನ ವಿಶೇಷ ಅನುಮತಿ ಪಡೆಯಬೇಕು ಎಂದು ಮನವಿ ಮಾಡಿದ್ದರೂ ಮುಂದಿನ ಕ್ರಮ ಕೈಗೊಂಡಿಲ್ಲ.
ಏತನ್ಮಧ್ಯೆ, ಆಗಸ್ಟ್ 5 ರಂದು ಚಿನ್ನದ ಪದರಗಳನ್ನು ಬೇರ್ಪಡಸಿ ಪರಿಶೀಲಿಸಲಾಗುವುದು ಮತ್ತು ಒಂದೇ ದಿನದಲ್ಲಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ದೇವಸ್ವಂ ಮಂಡಳಿ ಪ್ರಕಟಿಸಿದೆ. ಚಿನ್ನದ ಪದರಗಳನ್ನು ಕಲಕಿದರೆ ಮಾತ್ರ ಸೋರಿಕೆಯ ತೀವ್ರತೆ ಅರಿಯಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.
ತಂತ್ರಿ ಮತ್ತು ತಿರುವಾಭರಣ ಆಯೋಗದ ಮೇಲ್ವಿಚಾರಣೆ ಮತ್ತು ಉಪಸ್ಥಿತಿಯಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಶಬರಿಮಲೆ ದೇಗುಲದಲ್ಲಿ ಸೋರಿಕೆ; ದೇವಸ್ವಂ ಮಂಡಳಿ ನಿರ್ವಹಣೆ ವಿಳಂಬ
0
ಜುಲೈ 26, 2022