ತಿರುವನಂತಪುರ: ಬಾಲಗೋಕುಲಂನ ಜನ್ಮಾಷ್ಟಮಿ ಪ್ರಶಸ್ತಿಯನ್ನು ಹಿನ್ನೆಲೆ ಗಾಯಕ ಜಿ.ವೇಣುಗೋಪಾಲ್ ಅವರಿಗೆ ಘೋಷಿಸಲಾಗಿದೆ. . ಶ್ರೀಕೃಷ್ಣನ ದರ್ಶನಗಳಿಗೆ ಅನುಗುಣವಾಗಿ ಸಾಹಿತ್ಯ, ಕಲೆ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಬಾಲಗೋಕುಲಂ ಅಡಿಯಲ್ಲಿ ಬಾಲ ಸಂಸ್ಕಾರ ಕೇಂದ್ರವು 50,000 ರೂ., ಫಲಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರುವ ಪ್ರಶಸ್ತಿಯನ್ನು ಸ್ಥಾಪಿಸಿದೆ. ಶ್ರೀಕುಮಾರನ್ ತಂಬಿ, ಕೈದಪ್ರಂ ದಾಮೋದರನ್ ನಂಬೂದಿರಿ, ಪ್ರಾಧ್ಯಾಪಕ ಸಿ.ಎನ್.ಪುರುಷೋತ್ತಮನ್ ಮತ್ತು ಎನ್.ಹರೀಂದ್ರನ್ ಮಾಸ್ಟರ್ ಅವರನ್ನೊಳಗೊಂಡ ಸಮಿತಿಯು ಪ್ರಶಸ್ತಿಯನ್ನು ನಿರ್ಧರಿಸಿದೆ. ಶ್ರೀಕೃಷ್ಣ ಜಯಂತಿಯ ಸಂದರ್ಭದಲ್ಲಿ ಆಗಸ್ಟ್ 12 ರಂದು ಎರ್ನಾಕುಳಂನಲ್ಲಿ ನಡೆಯುವ ಸಾಂಸ್ಕøತಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ವರೆಗೆ 26ನೇ ಜನ್ಮಾಷ್ಟಮಿ ಪ್ರಶಸ್ತಿ ನೀಡಲಾಗಿದೆ . ಮಾತಾ ಅಮೃತಾನಂದಮಯಿದೇವಿ, ಮಹಾಕವಿ ಅಕಿತ್ತಂ, ಸುಗತ ಕುಮಾರಿ, ಯೂಸಫಲಿ ಕೇಚೇರಿ, ಕೆ.ಬಿ.ಶ್ರೀದೇವಿ, ಪಿ.ಲೀಲಾ, ಮಲ್ಲಿಯೂರು ಶಂಕರನ್ ನಂಬೂದಿರಿ, ಸ್ವಾಮಿ ಚಿದಾನಂದಪುರಿ, ಸ್ವಾಮಿ ಪರಮೇಶ್ವರಾನಂದ, ಕಲಾವಿದ ಕೆ.ಕೆ.ವಾರಿಯರ್, ತುಳಸಿ ಕೊಟುಂಕಲ್, ಅಂಬಲಪುಳ ಗೋಪಕುಮಾರ್, ವಿಷ್ಣುನಾರಾಯಣನ್ ನಂಬೂದಿರಿ, ಎಸ್. ರಮೇಶನ್ ನಾಯರ್, ಚೇಮಂಚೇರಿ ಕುಂಞÂ್ಞ ರಾಮನ್ ನಾಯರ್, ಪಿ.ಪರಮೇಶ್ವರನ್, ಮಧುಸೂದನನ್ ನಾಯರ್, ಕೆ.ಎಸ್. ಚಿತ್ರಾ, ಕೆ.ಜಿ.ಜಯನ್, ಪಿ.ನಾರಾಯಣ ಕುರುಪ್, ಸುವರ್ಣ ನಲಪಾಡ್, ಶ್ರೀಕುಮಾರನ್ ತಂಬಿ, ಪ್ರೊ. ತುರವೂರು ವಿಶ್ವಂಭರನ್, ಕೈದಪ್ರಂ ದಾಮೋದರನ್ ನಂಬೂದಿರಿ ಮತ್ತು ಕಲಾಮಂಡಲಂ ಗೋಪಿ ಅವರಿಗೆ ಈವರೆಗೆ ಈ ಅತ್ಯುಚ್ಚ ಪ್ರಶಸ್ತಿ ನೀಡಲಾಗಿತ್ತು.