HEALTH TIPS

ಧಾರಾಕಾರ ಮಳೆಯ ನಡುವೆ ಹಳದಿ ಟಾರ್ಪಾಲ್ ಅಡಿಯಲ್ಲಿ ಮದುವೆಯ ದಿಬ್ಬಣದ ಸಂಭ್ರಮ ಕಣ್ತುಂಬಿಕೊಂಡ ಜನತೆ!

Top Post Ad

Click to join Samarasasudhi Official Whatsapp Group

Qries

            ಚತ್ತೀಸ್ ಗಢ: ಮಳೆಗಾಲದಲ್ಲಿ ಸುರಿಯುವ ವರ್ಷಧಾರೆ ನಮ್ಮ ಪ್ರವಾಸದ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡುತ್ತದೆ ಎಂಬುದು ಹಲವರಿಲ್ಲಿರುವ ಸಾಮಾನ್ಯವಾದ ಭಯ. ಆದರೆ ವಿವಾಹ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದ ತಂಡವೊಂದು ಭಾರಿ ವರ್ಷಧಾರೆಯ ನಡುವೆಯೇ ಮದುವೆಯ ದಿಬ್ಬಣವನ್ನು ನಡೆಸಿ ಸಂಭ್ರಮಿಸಿದೆ. 

                    ಮಳೆಯನ್ನೂ ಲೆಕ್ಕಿಸದೇ ಹಳದಿ ಟಾರ್ಪಾಲ್ ನ ಅಡಿಯಲ್ಲಿ ಮದುವೆಯ ಮೆರವಣಿಗೆಯನ್ನು ಮಂದಿ ಸಂಭ್ರಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಅವಿಸ್ಮರಣೀಯ ಘಟನೆಯನ್ನು ಈ ವರೆಗೂ ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.


                 ಒಂದು ನಿಮಿಷದ ಈ ವಿಡಿಯೋ ಒಂದರಲ್ಲಿ ಜನರ ಗುಂಪೊಂದು ಹಳದಿ ಬಣ್ಣದ ಬೃಹತ್ ಟಾರ್ಪಾಲ್ ಅಡಿಯಲ್ಲಿ ಆಶ್ರಯ ಪಡೆದಿದ್ದು, ಮಳೆಯನ್ನೂ ಲೆಕ್ಕಿಸದೇ  ಮೆರವಣಿಗೆಯನ್ನು ಆನಂದಿಸುತ್ತಿದ್ದರು. ಇನ್ನೂ ಕೆಲವು ಮಂದಿ ಮಳೆಯಲ್ಲಿಯೇ ನೃತ್ಯ ಮಾಡುತ್ತಿದ್ದದ್ದೂ ಕಂಡುಬಂದಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ಹೆಚ್ಚು ಪೋಸ್ಟ್ ಆಗುತ್ತಿದ್ದಂತೆಯೇ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. 

                 ಏನೇ ಆಗಲಿ, ಮದುವೆಯ ದಿಬ್ಬಣ ನಡೆದೇ ನಡೆಯುತ್ತದೆ ಎಂಬ ಈ ಜನಗಳ ದೃಢ ಸಂಕಲ್ಪದಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಓರ್ವ ವ್ಯಕ್ತಿ ಹೇಳಿದರೆ, ಮನಸ್ಸಿದ್ದರೆ ಮಾರ್ಗ ಎಂದಿದ್ದಾರೆ ಮತ್ತೋರ್ವ ನೆಟ್ಟಿಗರು. ಮತ್ತೋರ್ವ ವ್ಯಕ್ತಿ ಈ ವೀಡಿಯೋಗೆ ಮಳೆಯಲ್ಲಿ ನೃತ್ಯ:  ಮದುವೆಯ ದಿಬ್ಬಣದ ವಿಶೇಷ ಸಂದರ್ಭ ಎಂಬ ಶೀರ್ಷಿಕೆ ನೀಡಿ ಟ್ವೀಟ್ ಮಾಡಿದ್ದಾರೆ. 

                  ಇನ್ನೊಬ್ಬರು ಈ ವಿಡಿಯೋದ ಮೂಲಕ ತಾನೇಕೆ ತನ್ನ ದೇಶವನ್ನು ಪ್ರೀತಿಸುತ್ತೇನೆ ಎಂದು ಹೇಳಲು ಯತ್ನಿಸಿದ್ದು,  ನನ್ನ ದೇಶವನ್ನು ನಾನೇಕೆ ಪ್ರೀತಿಸುತ್ತೇನೆ ಎಂದರೆ ಜನರು ಪರಿಸ್ಥಿತಿ ಏನೇ ಇರಲಿ ಅವರ ದಿನವನ್ನು ಆನಂದಿಸುವುದನ್ನು ಮಾತ್ರ ಮರೆಯುವುದಿಲ್ಲ ಎಂದು ಕಾಮೆಂಟಿಸಿದ್ದಾರೆ. ಈ ವರೆಗೂ ಈ ವಿಶೇಷ ವಿಡಿಯೋ 300 ಸಾವಿರ ವೀಕ್ಷಣೆಗಳನ್ನು ಕಂಡಿದ್ದು, 14 ಸಾವಿರಕ್ಕೂ ಅಧಿಕ ಮಂದಿ ಲೈಕ್ ನೀಡಿದ್ದಾರೆ. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries