ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ವತಿಯಿಂದ ಪೌಷ್ಠಿಕಯುಕ್ತ ಹಲಸಿನ ಖಾದ್ಯೋತ್ಪನ್ನ ತಯಾರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ "ಹಲಸಿನ ಹಣ್ಣಿನ ಮೇಳ" ಜರಗಿತು.
ಇದರ ಅಂಗವಾಗಿ ಪಂಚಾಯತು ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್ ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಸಭೆಯ ಅಧ್ಯಕ್ಷತೆವಹಿಸಿದ್ದರು.ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ,ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ವಾರ್ಡ್ ಸದಸ್ಯರಾದ ಉಷಾ ಕುಮಾರಿ,ರಮ್ಲ,ಪಂ.ಕಾರ್ಯದರ್ಶಿ ರಹಮಾನ್ ಅನ್ವರ್, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ, ಅಕೌಂಟೆಟ್ ಸುನೀತಾ , ಸಿಡಿಎಸ್ ಸದಸ್ಯೆಯರಾದ ಚಂದ್ರಾವತಿ,ಸರಸ್ವತಿ, ಪುಷ್ಪಲತಾ,ಉದಯಕುಮಾರಿ,ಸಿಸಿಲಿಯಾ, ಪಂ.ಪ್ರೇರಕ್ ಅನಂದ ಕೆ, ಮೊದಲಾದವರು ಪಾಲ್ಗೊಂಡಿದ್ದರು. ಸರೋಜಿನಿ ಪ್ರಾರ್ಥನೆಗೈದರು.ಯಶ್ಮಿನ್ ಸ್ವಾಗತಿಸಿದರು.
ಹಲಸಿನ ಹಣ್ಣಿನ ಮೇಳದಲ್ಲಿ ಸುಮಾರು ಐವತ್ತರಷ್ಟು ವೈವಿಧ್ಯಮಯ ಖಾದ್ಯೋತ್ಪನ್ನಗಳನ್ನು ಕುಟುಂಬಶ್ರೀ ಸದಸ್ಯೆಯರು ತಯಾರಿಸಿ ಪ್ರದರ್ಶಿಸಿದರು.