ಮೊದಲೆಲ್ಲಾ ಹೊರಗಡೆ ಹೋಗುವಾಗ ಬ್ಯಾಗ್ ಅಲ್ಲಿ ಒಂದು ನೀರಿನ ಬಾಟಲ್ ಅನ್ನು ತೆಗೆದುಕೊಂಡು ಹೋಗುವುದು ಅಭ್ಯಾಸವಾಗಿತ್ತು, ಆದರೀಗ ಅರೆ.. 10 ರುಪಾಯಿ ಕೊಟ್ಟರೆ ನೀರಿನ ಬಾಟಲ್ ಸಿಗತ್ತೆ ಅದನ್ನ ಬೇರೆ ಯಾಕೆ ಅನ್ನೋ ಅಷ್ಟು ಅಲಸ್ಯ, ಬದಲಾವಣೇ ಆಗಿದೆ. ಇದೀಗ ಪ್ರಪಂಚಾದ್ಯಂತ ಈ ವಾಟರ್ ಬಾಟಲ್ ಉದ್ಯಮ ಅತ್ಯಂತ ಲಾಭದ, ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ.
ನೀರು ಅಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಆದರೆ ಆ ನೀರು ಕುಡಿಯಲು ಯೋಗ್ಯವೇ, ಇದನ್ನು ಹೇಗೆ ತಯಾರಿಸುತ್ತಾರೆ? ಎಂಬ ಯೋಚನೆಯನ್ನು ನಾವು ಮಾಡುವುದಿಲ್ಲ. ಈ ಬಾಟಲ್ ನೀರು ಎಷ್ಟು ಒಳ್ಳೆಯದು, ಇದರಿಂದಾಗುವ ಅಪಾಯವೇನು?, ಇದರ ಅಡ್ಡಪರಿಣಾಮಗಳೇನು, ಇದು ಪರಿಸರಕ್ಕೆ ಎಷ್ಟು ಹಾನಿ? ಮುಂದೆ ನೋಡೊಣ:
1 - ಬ್ಯಾಕ್ಟೀರಿಯಾದ ಮಟ್ಟಗಳು ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್ ವೆಬ್‌ಸೈಟ್ ಪ್ರಕಾರ, * ನಲ್ಲಿಗಳಲ್ಲಿ ಬರುವ ನೀರಿನಲ್ಲಿ ನಿಶ್ಚಿತವಾಗಿ ಇ.ಕೋಲಿ ಅಥವಾ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ (ಮಲ ವಸ್ತುವಿನಿಂದ ಸಂಭವನೀಯ ಮಾಲಿನ್ಯವನ್ನು ಸೂಚಿಸುವ ಬ್ಯಾಕ್ಟೀರಿಯಾ). ಇರುವುದಿಲ್ಲ ಎಂಬುದು ದೃಢೀಕರಿಸಲಾಗಿದೆ. ಆದರೆ ಪ್ಯಾಕೇಜ್ಡ್ ವಾಟರ್ ಬಾಟಲ್‌ನಲ್ಲಿ ಇದರ ಬಗ್ಗೆ ಯಾವುದೇ ದೃಢೀರಕಣ ಇರುವುದಿಲ್ಲ ಹಾಗೂ ಈ ನಿಯಮಗಳನ್ನು ಅನುಸರಿಸಬೇಕು ಎಂಬ ಷರತ್ತು ಸಹ ಇಲ್ಲ. * ನಲ್ಲಿಯ ನೀರನ್ನು ಬಳಸುವ ಮುನ್ನ ಕಡ್ಡಾಯವಾಗಿ ಫಿಲ್ಟರ್ ಮಾಡಿ ಮತ್ತು ಸೋಂಕುರಹಿತಗೊಳಿಸಿ ನಂತರ ಸಾರ್ವಜನಿಕರಿಗೆ ಪೂರೈಸಲಾಗುತ್ತದೆ. ಆದರೆ ಈ ವಾಣಿಜ್ಯ ಕಾರ್ಯಾಚರಣೆಗಳಿಂದ ತಯಾರಾಗುವ ಬಾಟಲ್ ನೀರುಈ ರೀತಿಯ ಯಾವುದೇ ಶುದ್ಧತೆಯ ಬಗ್ಗೆ ಎಲ್ಲೂ ಅಥವಾ ಸೋಂಕು ತೆಗೆಯುವ ಬಗ್ಗೆ ಖಚಿತ ಮಾಹಿತಿ ಇಲ್ಲ. * ಬಾಟಲ್ ನೀರಿನ ಶುದ್ಧತೆಯನ್ನು ವಾಣಿಜ್ಯ ಬಾಟ್ಲಿಂಗ್ ಸ್ಥಾವರಗಳಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾವನ್ನು ವಾರಕ್ಕೊಮ್ಮೆ ಪರೀಕ್ಷಿಸುತ್ತಾರೆ. ಆದರೆಎಂಜಿನಿಯರ್‌ಗಳು ತಿಂಗಳಿಗೆ ನೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ದೊಡ್ಡ-ನಗರದ ಟ್ಯಾಪ್ ನೀರನ್ನು ಪರೀಕ್ಷಿಸುತ್ತಾರೆ. * ಕೋಲಿಫಾರ್ಮ್ ಸೇರಿದಂತೆ ವಿವಿಧ ಜೀವಿಗಳು ಖನಿಜಯುಕ್ತ ನೀರಿನಲ್ಲಿ ಕಂಡುಬರುತ್ತವೆ ಮತ್ತು ಸಾಕಷ್ಟು ಸಮಯದವರೆಗೆ ಬದುಕುತ್ತವೆ. ಇಂಥಾ ನೀರನ್ನು ಬಾಟಲಿಗಳಲ್ಲಿ ತುಂಬಿದಾಗ ಇದು ಹೆಚ್ಚು ಕಾಲ ಜೀವಿಸುತ್ತದೆ, ವಿಶೇಷವಾಗಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಈ ಅಂಶ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಮತ್ತು ಇದು ಸೋಂಕಿನ ಸಂಭವನೀಯ ಅಪಾಯಕಾರಿ ಅಂಶವೆಂದು ಹೇಳಲಾಗಿದೆ.
2. ಬಾಟಲ್ ನೀರಿನ ಪರಿಸರಕ್ಕೆ ಮಾರಕ ಮತ್ತು ಆರ್ಥಿಕ ವೆಚ್ಚ ಪೆಸಿಫಿಕ್ ಇನ್‌ಸ್ಟಿಟ್ಯೂಟ್‌ನ ಪ್ರಕಾರ, * ಬಾಟಲಿಂಗ್ ಪ್ರಕ್ರಿಯೆಯು 2.5 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸಿತು. * ಮಾರಾಟ ಮಾಡಬಹುದಾದ 1 ಲೀಟರ್ ಬಾಟಲ್ ನೀರನ್ನು ಉತ್ಪಾದಿಸಲು ಇದು 3 ಲೀಟರ್ ನೀರನ್ನು ವೆಚ್ಚಮಾಡುತ್ತದೆ. * ಬಳಸದೇ ಉಳಿಯುವ ತ್ಯಾಜ್ಯದ ನೀರನ್ನು ಮರುಬಳಕೆ ಮಾಡಬಹುದಾದರೂ, ಇವುಗಳಲ್ಲಿ ಶೇಕಡಾ 4ರಲ್ಲಿ 1 ಭಾಗ ಮಾತ್ರ ಮರುಬಳಕೆ ಮಾಡಲಾಗುತ್ತಿದೆ. ಇನ್ನಷ್ಟು ನೀರು ಭೂಮಿಯಲ್ಲಿ ಆವಿಯಾದರೆ ಬಹುತೇಕ ತ್ಯಾಜ್ಯದ ನೀರು ದುರದೃಷ್ಟವಶಾತ್ ಕಸವಾಗಿ ಬದಲಾಗುತ್ತಿದೆ, ಇದು ಅವನತಿ ಹೊಂದಲು 450 ರಿಂದ 1000 ವರ್ಷಗಳನ್ನು ತೆಗೆದುಕೊಳ್ಳುತ್ತವೆ ಎಂದು ಸಂಶೋಧನೆ ಹೇಳುತ್ತದೆ. * ಆರ್ಥಿಕವಾಗಿಯೂ ಇದು ಬಹಳ ನಷ್ಟವನ್ನು ಉಂಟುಮಾಡುತ್ತದೆ. ನಾವು ಟ್ಯಾಪ್ ನೀರಿಗಿಂತ ಸಾವಿರಾರು ಪಟ್ಟು ಹಣವನ್ನು ಬಾಟಲಿ ನೀರಿಗಾಗಿ ಖರ್ಚು ಮಾಡುತ್ತಿದ್ದೇವೆ. ಒಂದು ಮನೆಯ ಸಾಮಾನ್ಯ ಗ್ಯಾಲನ್ ನೀರಿನ ಬೆಲೆ ಕೇವಲ ಒಂದು ಪೈಸೆ ಮಾತ್ರ. ಆದರೆ ಬಾಟಲ್ ನೀರು ಕೇವಲ ಒಂದು ಲೀಟರ್‌ಗೆ ಕನಿಷ್ಠ 20 ರುಪಾಯಿ. ಇಂಥಾ ಹಣವನ್ನು ನೀವು ಉಳಿಸುವುದಾದರೂ ವರ್ಷಕ್ಕೆ ಸಾವಿರಾರು ರುಪಾಯಿಗಳನ್ನು ನೀವು ಉಳಿಸಬಹುದು.
3. ನಮ್ಮ ನೀರಿನಲ್ಲಿ ಕ್ಯಾನ್ಸರ್‌ಕಾರಕ ಪ್ಲಾಸ್ಟಿಕ್ ಪೆಟ್ರೋಲಿಯಂನ ತ್ಯಾಜ್ಯ ಉತ್ಪನ್ನಗಳು ಮತ್ತು ಇತರ ರಾಸಾಯನಿಕಗಳ ಬಳಕೆಯಿಂದ ಪ್ಲಾಸ್ಟಿಕ್ ತಯಾರಿಸಲಾಗುತ್ತದೆ. ನೀರಿನ ಶುದ್ಧತೆಯು ಪ್ಲಾಸ್ಟಿಕ್ ಬಾಟಲ್ ತಯಾರಿಸುವ ವಿಧಾನ ಮತ್ತು ಬಾಟಲ್ ನೀರನ್ನು ಶೇಖರಿಸುವ ವಿಧಾನವನ್ನು ಅವಲಂಬಿಸಿದೆ. ಕೆಲವು ಸಂದರ್ಭಗಳಲ್ಲಿ ಅಥವಾ ಕೆಲವು ಸ್ಥಳೀಯ ಕಂಪನಿಗಳ ಅಸುರಕ್ಷಿತ ನಿಯಮಗಳಿಂದ ಪ್ಲಾಸ್ಟಿಕ್ ಕಂಟೇನರ್ ಕ್ಷೀಣಿಸಲು ಪ್ರಾರಂಭಿಸಬಹುದು, ಇದರಿಂದಾಗಿ ಪ್ಲಾಸ್ಟಿಕ್ ಸಂಯುಕ್ತಗಳು ನೀರಿನಲ್ಲಿ ಸೋರಿಕೆಯಾಗುತ್ತವೆ. ನೀರಿನ ಬಾಟಲಿಗಳಲ್ಲಿ ಪ್ಲಾಸ್ಟಿಕ್ ರಾಸಾಯನಿಕ ಸಂಯುಕ್ತಗಳಾದ, ಬಿಸ್ಫೆನಾಲ್ ಎ (ಬಿಪಿಎ), ನಾನಿಲ್ಫೆನಾಲ್ (ಎನ್‌ಪಿ), ಟೆರ್ಟ್-ಆಕ್ಟೈಲ್‌ಫೆನಾಲ್ (ಟಿಒಪಿ), ಡೈಮಿಥೈಲ್ ಥಾಲೇಟ್ (ಡಿಎಂಪಿ), ಡೈಥೈಲ್ ಥಾಲೇಟ್ (ಡಿಇಪಿ), ಡಿ-ಎನ್-ಬ್ಯುಟೈಲ್ ಥಾಲೇಟ್ (ಡಿಬಿಪಿ), ಬ್ಯುಟೈಲ್, ಬೆಂಜೈಲ್ ಥಾಲೇಟ್ (BBP), ಡಿ (2-ಇಥೈಲ್ಹೆಕ್ಸಿಲ್) ಥಾಲೇಟ್ (DEHP) ಮತ್ತು ಡಿ (ಎನ್-ಆಕ್ಟೈಲ್) ಥಾಲೇಟ್ (DNOP) ಅಂಶಗಳು ಪತ್ತೆಯಾಗಿದೆ. ಈ ಸಂಯುಕ್ತಗಳಲ್ಲಿ ಹೆಚ್ಚಿನವು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸಿದ ವಿವಿಧ ಬ್ರಾಂಡ್‌ಗಳಿಂದ ಬಾಟಲಿ ನೀರಿನಲ್ಲಿ ಪತ್ತೆಯಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಸಾರ್ವಜನಿಕರ ಒತ್ತಡದಿಂದಾಗಿ ಬಾಟಲಿ ನೀರಿನ ತಯಾರಕರು BPA ಹೊಂದಿರುವ ಬಾಟಲಿಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಕೇಳಿರಬಹುದು. ಏಕೆಂದರೆ ಪ್ಲಾಸ್ಟಿಕ್ ಸಂಯುಕ್ತವು ನೀರಿನಲ್ಲಿ ಸೋರಿಕೆಯಾಗಬಹುದು ಎಂಬ ಕಾರಣದಿಂದ. BPA ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದು ಹೆಚ್ಚಿನ ಪ್ರಮಾಣದ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದೆ.
4. ಬಾಟಲ್ ನೀರು ಶುದ್ಧವಾಗಿದೆ ಎಂಬುದು ನಂಬಿಕೆಯಷ್ಟೆ ಅನೇಕ ಜನರು ಬಾಟಲ್ ನೀರು ಶುದ್ಧವಾಗಿರುತ್ತದೆ, ರುಚಿ ಮತ್ತು ಮಿನರಲ್ಸ್ ಇರುತ್ತದೆ ಎಂದುಕೊಳ್ಳುತ್ತಾರೆ. ಟ್ಯಾಪ್ ನೀರಿಗಿಂತ ಉತ್ತಮ ಗುಣಮಟ್ಟದ ನೀರು ಬಾಟಲ್‌ನಲ್ಲಿ ಸಿಗುತ್ತದೆ ಎಂದು ನಂಬುತ್ತಾರೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ, ಬಾಟಲ್ ನೀರಿನ ಮಾದರಿಗಳಲ್ಲಿ ಬ್ಯಾಕ್ಟೀರಿಯಾದ ಮಟ್ಟವು ಹೆಚ್ಚಾಗಿದೆ, ಇದರಲ್ಲಿರುವ ಪ್ಲಾಸ್ಟಿಕ್ ಆರೋಗ್ಯಕ್ಕೆ ಮಾರಕವೂ ಹೌದು. ಬಹುತೇಕ ಬಾಟಲ್ ನೀರು ಟ್ಯಾಪ್ ನೀರಿನಷ್ಟು ಶುದ್ಧವಾಗಿರಲು ಸಾಧ್ಯವಿಲ್ಲ.