ಕಾಸರಗೋಡು: ಬ್ಲಾಕ್ ಆರೋಗ್ಯ ಮೇಳಕ್ಕೆ ಸಂಬಂಧಿಸಿದ ಕ್ರೀಡಾಕೂಟಗಳು ಇಂದು (ಜುಲೈ 20) ಪ್ರಾರಂಭವಾಗಲಿವೆ. ಸ್ಪರ್ಧೆಯಲ್ಲಿ ಫುಟ್ ಬಾಲ್, ಶಟಲ್ ಮತ್ತು ಹಗ್ಗ ಜಗ್ಗಾಟಗಳು ಇರಲಿವೆ. ಜೀವನಶೈಲಿ ರೋಗ ನಿಯಂತ್ರಣದಲ್ಲಿ ವ್ಯಾಯಾಮದ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗ್ಗೆ ಕುಂಬಳೆ ಪೆರ್ವಾಡ್ ಕಿಕ್ ಫ್ಲಿಕ್ ಟರ್ಫ್ ನಲ್ಲಿ ಫುಟ್ ಬಾಲ್ ಪಂದ್ಯ ನಡೆಯಲಿದೆ. ಬ್ಲಾಕ್ ನ 6 ಗ್ರಾ.ಪಂ.ಗಳಿಂದ ಉತ್ತಮ ಎರಡು ತಂಡಗಳು ಭಾಗವಹಿಸಬಹುದು.
ಸಿವಿಲ್ ಸ್ಟೇಷನ್ ಟರ್ಫ್ ನಲ್ಲಿ ಶಟಲ್ ಪಂದ್ಯವನ್ನು ಆಯೋಜಿಸಲಾಗಿದೆ. ಮಹಿಳೆಯರು ತಂಡವಾಗಿಯೂ ಸ್ಪರ್ಧಿಸಬಹುದು. ಮೊಗ್ರಾಲ್ ಪುತ್ತೂರು ಬ್ಲಾರ್ ಕೋಟ್ ನಲ್ಲಿರುವ ರಕ್ತೇಶ್ವರಿ ಮೈದಾನದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಬಹುದು.
ಚೆಂಗಳ, ಕುಂಬಳೆ, ಮೊಗ್ರಾಲ್ ಪುತ್ತೂರು, ಬದಿಯಡ್ಕ, ಮಧೂರು, ಚೆಮ್ಮನಾಡು ಪಂಚಾಯತ್ ವ್ಯಾಪ್ತಿಯ ತಂಡಗಳು ಭಾಗವಹಿಸಬೇಕೆಂದು ಸಂಘಟಕರು ಮಾಹಿತಿ ನೀಡಿರುವರು.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಟ್ರೋಫಿ ನೀಡಲಾಗುವುದು. ಸಂಘಟನಾ ಸಮಿತಿ ಅಧ್ಯಕ್ಷೆ ಹಾಗೂ ಬ್ಲಾಕ್ ಅಧ್ಯಕ್ಷೆ ಸಿಎ ಸೈಮಾ, ಆರೋಗ್ಯ ಮೇಲ್ವಿಚಾರಕ ಹಾಗೂ ಸಂಘಟನಾ ಸಮಿತಿ ಪ್ರಧಾನ ಸಂಚಾಲಕ ಬಿ. ಅಶ್ರಫ್ ಮಾಹಿತಿ ನೀಡಿದರು.