ಕಾಸರಗೋಡು: ಜಿಲ್ಲೆಯಲ್ಲಿ ಆರ್ಥಿಕ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಕುಟುಂಬಶ್ರೀ ಮೂಲಕ ಜಾರಿಗೊಳಿಸಿರುವ 'ಒಂದು ಗೂಡು ಮತ್ತು 20 ಕೋಳಿಗಳು'ಯೋಜನೆ ಫಲಪ್ರದವಾಗುತ್ತಿದೆ. ಪ್ರತಿ ಫಲಾನುಭವಿಗೆ ಪೂರ್ಣ ಬೆಳೆದ 20 ಕೋಳಿಗಳನ್ನು ಮತ್ತು ಇವುಗಳನ್ನು ಪೋಷಿಸಲು ಪಂಜರವನ್ನು ಒದಗಿಸುವ ಯೋಜನೆ ಇದಾಗಿದೆ. ಬೇಡಡ್ಕ ಗ್ರಾಮ ಪಂಚಾಯತ್ ಕುಟುಂಬಶ್ರೀ ಮಿಷನ್ ಅಡಿಯಲ್ಲಿ ಟೀಮ್ ಬೇಡಡ್ಕ ಕುಟುಂಬಶ್ರೀ ಆಗ್ರೋ ಪೆÇ್ರಡ್ಯೂಸರ್ಸ್ ಕಂಪೆನಿ ಪ್ರಾಯೋಜಕರಾಗಿದ್ದಾರೆ.
ಟೀಮ್ ಬೇಡಡ್ಕ ಕಂಪನಿಯ ಕಾರಕ್ಕಾಟ್ ಫಾರ್ಮ್‍ನಲ್ಲಿ ಲಸಿಕೆ ಸೇರಿದಂತೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಸಾಕಿದ ಬಿ.ವಿ 380 ತಳಿಯ ಕೋಳಿ ಇದಾಗಿದೆ. ಕೋಳಿ ಸಾಕಣಿಕೆ ಕ್ಷೇತ್ರದಲ್ಲಿನ ಏಕಸ್ವಾಮ್ಯ ಕೊನೆಗೊಳಿಸುವುದರ ಮೂಲಕ, ಸರ್ಕಾರದ ಅನುಮೋದಿತ ಸೂಚನೆಗಳನ್ನು ಅನುಸರಿಸಿ ಕಂಪನಿ ಕಾರ್ಯಾಚರಿಸಲಿದೆ. ಈ ಯೋಜನೆಯ ಮೂಲಕ ಗುಣಮಟ್ಟದ ಮೊಟ್ಟೆ ಇಡುವ ಕೋಳಿ ಹಾಗೂ ಸ್ಥಳೀಯ ಕೋಳಿಗಳನ್ನು ನೀಡಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಅಲ್ಲದೆ ಕೇರಳ ಬ್ಯಾಂಕ್ ಕುಂಡಂಗುಳಿ ಶಾಖೆಯ ಸಹಯೋಗದೊಂದಿಗೆ ಲಿಂಕ್ಡ್ ಸಾಲದ ಮೂಲಕ 'ಗೂಡು ಮತ್ತು ಕೋಳಿ' ಯೋಜನೆಯನ್ನು ಜಾರಿಗೆ ತರಲು ಯೋಜನೆ ಸಿದ್ಧವಾಗಿದೆ ಎಂದು ಟೀಮ್ ಬೇಡಡ್ಕ ಕುಟುಂಬಶ್ರೀ ಪದಾಧಿಕಾರಿಗಳು ತಿಳಿಸಿದ್ದಾರೆ.