ಕಾಸರಗೋಡು: ಜೂನ್ 1 ರಿಂದ ಜುಲೈ 10 ರವರೆಗೆ ಜಿಲ್ಲೆಯಲ್ಲಿ ಸಾಮಾನ್ಯ 1300 ಮಿಮೀ ಮಳೆಯಾಗುವಲ್ಲಿ ಈ ಬಾರಿ 1302 ಮಿಮೀ ಮಳೆಯಾಗಿದ್ದು, ಕೇರಳದಲ್ಲೇ ಅತ್ಯಧಿಕ ಮಳೆ ಪಡೆದ ಜಿಲ್ಲೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಮೊದಲ 30 ದಿನಗಳಲ್ಲಿ ಕೇವಲ 478 ಮಿಮೀ (51% ಕಡಿಮೆ) ಮಳೆಯಾಗಿದ್ದರೆ, ನಂತರದ 10 ದಿನಗಳಲ್ಲಿ 824 ಮಿಮೀ ಮಳೆಯಾಗಿದೆ!!!
ಜೊತೆಗೆ ಇನ್ನೂ ಐದು ದಿನಗಳ ಕಾಲ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಮಧ್ಯೆ ಇದು ರೆಡ್ ಅಲರ್ಟ್ ಮಟ್ಟಕ್ಕೂ ತಲಪುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಳ್ಳಿಹಾಕದಿರುವುದರಿಂದ ಅತಿ ಜಾಗ್ರತೆಯಲ್ಲಿರುವಂತೆ ಜನರಿಗೆ ಸೂಚಿಸಲಾಗಿದೆ.