ನವದೆಹಲಿ: ಉದಯಪುರ ಕೃತ್ಯದ ಆರೋಪಿಗಳಿಗೆ ಕ್ಷಮಿಸಬೇಕು ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಹೇಳಿದ್ದಾರೆ ಎಂಬಂತೆ ತಿರುಚಿದ್ದ ವಿಡಿಯೊವನ್ನು ಬಿಜೆಪಿ ಸಂಸದರು, ಶಾಸಕರು ಸೇರಿ ಹಲವು ಮುಖಂಡರು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಲೋಪಕ್ಕಾಗಿ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಪಡಿಸಿದೆ.

ಕೇರಳದಲ್ಲಿನ ತಮ್ಮ ಸಂಸದರ ಕಚೇರಿ ಗುರಿಯಾಗಿಸಿ ಗಲಾಟೆ ಮಾಡಿದ್ದ ಎಸ್‌ಎಫ್‌ಐ ಕಾರ್ಯಕರ್ತರನ್ನು ಕ್ಷಮಿಸಬೇಕು ಎಂದು ರಾಹುಲ್‌ಗಾಂಧಿ ಮಾತನಾಡಿದ್ದರು. ಆ ಹೇಳಿಕೆಯನ್ನು ತಿರುಚಿ ಉದಯಪುರ ಕೃತ್ಯಕ್ಕೆ ಅನ್ವಯಿಸಿ ಹೇಳಿದಂತೆ ವಿಡಿಯೊ ಅನ್ನು ರೂಪಿಸಿದ್ದು, ಬಿಜೆಪಿಯ ಹಲವು ಮುಖಂಡರು ಹಂಚಿಕೊಂಡಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್ ಅವರು ಈ ಬೆಳವಣಿಗೆಗೆ ತೀವ್ರ ಆಕ್ರೋಶ ವ್ಯಕ್ತಪಡಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರವನ್ನು ಬರೆದಿದ್ದು, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
'ಸಾಮಾಜಿಕ ಜಾಲತಾಣವನ್ನು ಇಷ್ಟೊಂದು ಬೇಜವಾಬ್ದಾರಿಯಾಗಿ ಮತ್ತು ಕ್ರಿಮಿನಲ್ ಸ್ವರೂಪದ ದೃಷ್ಟಿಯಿಂದ ಬಳಸಿಕೊಳ್ಳಲು ಉತ್ತೇಜನ ನೀಡುವ ಬಿಜೆಪಿ ಮತ್ತು ಅದರ ಮುಖಂಡರ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಸಿದ್ದಾರೆ.
ಹಲವು ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಮತ್ತು ಉತ್ಸಾಹದಿಂದ ಇಂತ ತಪ್ಪುಗ್ರಹಿಕೆಯ ಅಡಕವನ್ನು ಹಂಚಿಕೊಂಡಿದ್ದಾರೆ. ಆದರೆ, ಮೂಲ ವಿಡಿಯೊದಲ್ಲಿ ಇರುವಂತೆ ರಾಹುಲ್ ಗಾಂಧಿ ಅವರ ಹೇಳಿಕೆ ವಯನಾಡ್ ಘಟನೆಗೆ ಸಂಬಂಧಪಟ್ಟಿದಾಗಿದೆ ಎಂದು ತಿಳಿಸಿದ್ದಾರೆ.