ಮಂಗಳೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಕಾರ್ಯ ಯೋಜನೆ ಬಗ್ಗೆ ಸಮಗ್ರ ಯೋಜನೆ ರೂಪಿಸಲು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಭಾನುವಾರ ಸಮಾಲೋಚನಾ ಸಭೆ ನಡೆಯಿತು.
ರಾಘವೇಂದ್ರ ಉಡುಪ ನೇರಳೆಕಟ್ಟೆ , ಸುಜಯೀಂದ್ರ ಹಂದೆ, ಕುಂದಾಪುರದ ವಕೀಲರ ಸಂಘದ ಹಿರಿಯ ವಕೀಲ ಶಂಕರ ಪೈ ನೇರಳೆಕಟ್ಟೆ, ವೈಕುಂಠ ಹೇರ್ಳೆ, ಜಗದೀಶ್ ಹೊಳ್ಳ, ಪ್ರಶಾಂತ್ ಹೊಳ್ಳ, ಕೂಡ್ಲಿ ಉಡುಪರು, ವಿನಾಯಕ ಮಯ್ಯ, ಮುಂತಾದ ಹಲವಾರು ಅಭಿಮಾನಿಗಳು ಭಾಗವಹಿಸಿ ಮೆಚ್ಚುಗೆ ಸೂಚಿಸಿದರು. ಪ್ರತಿಷ್ಠಾನದ ರೂವಾರಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಯೋಜನೆಗಳ ಮಾಹಿತಿ ನೀಡಿದರು.
ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರ್ವಹಿಸಿದರು.ಉದಯವಾಣಿ ವರದಿಗಾರರಾದ ಶ್ರೀ ಲಕ್ಷ್ಮೀ ಮಚ್ಚಿನ, ಜನಪ್ರತಿನಿಧಿ ವರದಿಗಾರರಾದ ನಾಗರಾಜ್ ವಂಡ್ಸೆ ಉಪಸ್ಥಿತರಿದ್ದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಯೋಜನೆಗಳ ಬಗ್ಗೆ ಕುಂದಾಪುರದಲ್ಲಿ ಸಮಾಲೋಚನಾ ಸಭೆ
0
ಜುಲೈ 26, 2022
Tags