ಪಾಲಕ್ಕಾಡ್: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಅಂಗವಾಗಿ ಯುವ ಕಾಂಗ್ರೆಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸುವ ವೇಳೆ ಅವಘಡ ಸಂಭವಿಸಿದೆ. ಪಾಲಕ್ಕಾಡ್ ಡಿಸಿಸಿ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಮುಖಂಡರು ರಾಷ್ಟ್ರಪತಿ ಭವನದ ಮೆರವಣಿಗೆಯಲ್ಲಿ ಸಂಸದ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಸುಲ್ತಾನ್‍ಪೇಟೆ ರಸ್ತೆಯಲ್ಲಿ ರಸ್ತೆತಡೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿದ್ದರು. ಇದೇ ವೇಳೆ ಆಕಸ್ಮಿಕವಾಗಿ ಕಾರ್ರ್ಯಕರ ದೋತಿಗೆ ಬೆಖಿ ಹತ್ತಿಕೊಂಡಿತು.
ಬೆಂಕಿ ವ್ಯಾಪಿಸುತ್ತಿದ್ದಂತೆ ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬಾದ ನಾಯಕ ಮುಂದೆ ಧಾವಿಸಿದ. ಯುವಕ ತನ್ನ ದೇಹಕ್ಕೆ ಬೆಂಕಿ ತಗಲಿಸಿಕೊಂಡು ಪೋಲೀಸರತ್ತ ಓಡಿದ್ದು, ಇದರಿಂದ ಬೆಂಕಿ ಮತ್ತಷ್ಟು ಹಬ್ಬಲು ಕಾರಣವಾಯಿತು. ಯುವ ಕಾಂಗ್ರೆಸ್ ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಹಾಗೂ ಪಾಲಕ್ಕಾಡ್ ನಗರಸಭಾ ಸದಸ್ಯ ಪಿಎಸ್ ವಿಬಿ ಗೆ ಅವಘಡ ಸಂಭಿಸಿತು.
ವಿಬಿ ಹಾಗೂ ಅವರನ್ನು ರಕ್ಷಿಸಲು ಪ್ರಯತ್ನಿಸಿದ ಇತರ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಬಟ್ಟೆಗಳಿಗೂ ಬೆಂಕಿ ವ್ಯಾಪಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಇಬ್ಬರು ಪೆÇಲೀಸರು ಗಾಯಗೊಂಡಿದ್ದಾರೆ. ಮುಷ್ಕರವನ್ನು ನಿರಾತಂಕವಾಗಿ ನಿರ್ವಹಿಸಿದ ಮುಖಂಡರು ದೊಡ್ಡ ಅಪಾಯ ತಂದೊಡ್ಡಿದ್ದಾರೆ. ದೊಡ್ಡ ಅನಾಹುತದಿಂದ ಎಲ್ಲರೂ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಧಾನಿಯವರ ಪ್ರತಿಕೃತಿ ದಹಿಸುವ ವೇಳೆ ದೋತಿಗೆ ಹತ್ತಿಕೊಂಡ ಬೆಂಕಿ: ಯುವ ಕಾಂಗ್ರೆಸ್ ಮುಖಂಡರಿಗೆ ಗಾಯ
0
ಜುಲೈ 27, 2022