ತಿರುವನಂತಪುರ: ತಮ್ಮನ್ನು ಯಾರೂ ಎಕೆಜಿ ಸೆಂಟರ್‍ನಿಂದ ಹೊರಹಾಕಿಲ್ಲ ಎಂದು ಎಸ್‍ಡಿಪಿಐ ಮುಖಂಡರು ಹೇಳಿದ್ದಾರೆ. ಎಕೆಜಿ ಕೇಂದ್ರಕ್ಕೆ ಭೇಟಿ ನೀಡಲು ಬಂದಿದ್ದ ಮುಖಂಡರನ್ನು ವಾಪಸ್ ಕಳುಹಿಸಲಾಗಿದೆ ಎಂಬ ಸಿಪಿಎಂ ವಿವರಣೆ ನೀಡಿದ್ದನ್ನು ಎಸ್‍ಡಿಪಿಐ ತಳ್ಳಿಹಾಕಿದೆ. ಎಕೆಜಿ ಸೆಂಟರ್ ತಲುಪಿದಾಗ ಕುಳಿತುಕೊಳ್ಳುವಂತೆ ಹೇಳಿ ಹತ್ತು ನಿಮಿಷ ಅಲ್ಲಿಯೇ ಕುಳಿತು ವಾಪಸ್ ತೆರಳಿದೆವು ಎಂದು ಎಸ್ ಡಿಪಿಐ ಮುಖಂಡ ಮುವಾಟ್ಟುಪುಳ ಅಶ್ರಫ್ ಮೌಲವಿ ತಿಳಿಸಿದ್ದಾರೆ.
ನಾವು ನಾಯಕರನ್ನು ಭೇಟಿ ಮಾಡಲು ಆಶಿಸಿರಲಿಲ್ಲ. ಭೇಟಿಯ ಬಗೆಗೂ ವಿಚಾರಿಸಿಲ್ಲ ಎಂದು ಅಶ್ರಫ್ ಮೌಲವಿ ವಿವರಿಸಿದರು. ಜುಲೈ 1 ರಂದು ಎಕೆಜಿ ಸೆಂಟರ್ ತಲುಪಿದ ಎಸ್‍ಡಿಪಿಐ ಸದಸ್ಯರು ಸಿಪಿಎಂ ಮುಖಂಡರನ್ನು ಭೇಟಿಯಾಗಬೇಕೆಂದು ಭದ್ರತಾ ಸಿಬ್ಬಂದಿಯನ್ನು ಕೇಳಿದರು ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿದ್ದರು. ನಾಯಕತ್ವ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಒಳಬಿಟ್ಟಿರಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು.
ಹೊರ ನಿಂತಿರುವ ಪೋಟೋಗಳನ್ನು ಎಸ್ ಡಿಪಿಐ ಮುಖಂಡರು ಬಿಡುಗಡೆಮಾಡಿದ್ದರು. ಅದು ಬಿಟ್ಟರೆ ಎಸ್‍ಡಿಪಿಐ ಜೊತೆ ಪಕ್ಷ ಯಾವುದೇ ರೀತಿಯ ಸಭೆ ನಡೆಸಿಲ್ಲ. ಇದೀಗ ಮತ್ತೊಂದು ರೀತಿಯಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದೂ ಪಿಣರಾಯಿ ಆರೋಪಿಸಿದ್ದಾರೆ.