ಎಡಪ್ಪಾಲ್: ರಿಮೋಟ್ ಕಂಟ್ರೋಲ್ ಬಳಸಿಕೊಂಡು ವಿದ್ಯುತ್ ಚಾಲಿತ ತೂಕದ ಯಂತ್ರದ ಮೂಲಕ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಚಿಕನ್ ಮಾರಾಟಗಾರನನ್ನು ಬಂಧಿಸಿರುವ ಘಟನೆ ಕೇರಳದ ಎಡಪಾಲ್ನಲ್ಲಿ ನಡೆದಿದೆ.
ಎಡಪ್ಪಾಲ್: ರಿಮೋಟ್ ಕಂಟ್ರೋಲ್ ಬಳಸಿಕೊಂಡು ವಿದ್ಯುತ್ ಚಾಲಿತ ತೂಕದ ಯಂತ್ರದ ಮೂಲಕ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಚಿಕನ್ ಮಾರಾಟಗಾರನನ್ನು ಬಂಧಿಸಿರುವ ಘಟನೆ ಕೇರಳದ ಎಡಪಾಲ್ನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ವಟ್ಟಮ್ಕುಲಮ್ ನಿವಾಸಿ ಅಫ್ಸಾಲ್ (31) ಎಂದು ಗುರುತಿಸಲಾಗಿದೆ.
ಆರೋಪಿ ಅಫ್ಸಾಲ್, ಬಕ್ರೀದ್ನಂತಹ ಹಬ್ಬದ ಸಮಯದಲ್ಲಿ 10 ರಿಂದ 20 ರೂಪಾಯಿವರೆಗೂ ರಿಯಾಯಿತಿ ನೀಡಿ ಚಿಕನ್ ಮಾರಾಟ ಮಾಡಿದ್ದಾರೆ. ಇದರಿಂದ ಈತ ಅಂಗಡಿ ಮುಂದೆ ಜನರ ದಂಡೇ ಸೇರುತ್ತಿತ್ತು. ಇದರಿಂದ ಇತರೆ ಅಂಗಡಿಗಳಿಗೆ ತುಂಬಾ ನಷ್ಟ ಉಂಟಾಗುತ್ತಿತ್ತು. ಇದರಿಂದ ಅನುಮಾನಗೊಂಡ ಇತರೆ ಚಿಕನ್ ಅಂಗಡಿ ಮಾಲೀಕರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟಿದ್ದಾರೆ.
ತೂಕದ ಯಂತ್ರದ ಮೇಲೆ 1 ಕೆಜಿ ಕೋಳಿ ಮಾಂಸವನ್ನು ಇಡುವ ಮೊದಲು ಯಂತ್ರದ ಪರದೆಯಲ್ಲಿ 1 ಕಿಲೋಗ್ರಾಂ ತೋರಿಸುತ್ತಿತ್ತು. ಇದನ್ನು ರಿಮೋಟ್ ಕಂಟ್ರೋಲ್ನಿಂದ ಮಾಡಿದ್ದ. ಈ ಬಗ್ಗೆ ದೂರು ನೀಡಿದ ಬಳಿಕ, ವಿಚಾರಣೆ ನಡೆಸಿದ ಪೊಲೀಸರು, ವಿದ್ಯುತ್ ಚಾಲಿತ ತೂಕದ ಯಂತ್ರದಲ್ಲಿ ವಂಚನೆ ನಡೆದಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅಫ್ಸಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.