ಕೋಝಿಕ್ಕೋಡ್: ಸಾರಿಗೆ ಸಚಿವ ಆಂಟನಿ ರಾಜು ಅವರನ್ನು ಸಿಐಟಿಯು ಬಹಿಷ್ಕರಿಸಲಿದೆ. ಇಂದು ಕಣ್ಣೂರಿಗೆ ಬರುವ ಸಚಿವರಿಗೆ ಬಹಿಷ್ಕಾರ ಹಾಕುವುದಾಗಿ ಕಾರ್ಮಿಕ ಸಂಘಟನೆ ತಿಳಿಸಿದೆ. ಆಂಟನಿ ರಾಜು ಕೆ.ಎಸ್.ಆರ್.ಟಿ.ಸಿ. ಕಣ್ಣೂರು ಡಿಪೆÇೀ ಯಾರ್ಡ್ ಉದ್ಘಾಟನೆಗೆ ಆಗಮಿಸುವರು. ಕೆಎಸ್‍ಆರ್‍ಟಿಸಿಯ ಸಿಐಟಿಯು ಮಾನ್ಯತೆ ಪಡೆದ ಕೆಎಸ್‍ಆರ್‍ಟಿಇಎ ಒಕ್ಕೂಟವು ಸಚಿವರನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ.
ಕೆ ಎಸ್ ಆರ್ ಟಿ ಸಿ ಸ್ವಿಫ್ಟ್ ರಚನೆ ಹಾಗೂ ಕೆ ಎಸ್ ಆರ್ ಟಿ ಸಿ ಯಲ್ಲಿ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಕಾರ್ಮಿಕರು ಸಚಿವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಬಸ್‍ಗಳ ಬೋರ್ಡ್‍ಗೆ ಕಪ್ಪು ಬಾವುಟ ತೂಗು ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಪಕ್ಷಗಳ ಸಂಘಟನೆಗಳೂ ಸಚಿವರನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಕಾರ್ಮಿಕ ಸಂಘಟನೆಗಳ ವಿರುದ್ಧ ಸಚಿವರ ಹೇಳಿಕೆಯಿಂದ ಒಕ್ಕೂಟಗಳು ಕೆರಳಿವೆ.