ಕಾಸರಗೋಡು: ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ಯೋಜನೆ ಮತ್ತು ಕೇರಳ ಆಟೋ ಮೊಬೈಲ್ ವರ್ಕ್‍ಶಾಪ್ ಕಾರ್ಮಿಕರ ಕಲ್ಯಾಣ ಯೋಜನೆಯ ಸಕ್ರಿಯ ಸದಸ್ಯರಾಗಿರುವ 1 ರಿಂದ 5 ನೇ ತರಗತಿಯವರೆಗೆ ಕಲಿಯುತ್ತಿರುವ ಮಕ್ಕಳಿಗೆ ಉಚಿತ ಅಧ್ಯಯನ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮ ಜರುಗಿತು.
ಕಣ್ಣೂರು ಮಾಜಿ ಶಾಸಕ ಮತ್ತು ಮಂಡಳಿಯ ಅಧ್ಯಕ್ಷ ಕೆ.ಕೆ.ದಿವಾಕರನ್ ಉದ್ಘಾಟಿಸಿದರು. ಇತರ ಜಿಲ್ಲೆಗಳಲ್ಲೂ ಉಚಿತ ಸ್ಟಡಿ ಕಿಟ್‍ಗಳ ವಿತರಣೆಯನ್ನು ತಕ್ಷಣವೇ ಪೂರ್ಣಗೊಳಿಸಲು ಮಂಡಳಿಯು ನಿರ್ಧರಿಸಿದೆ ಮತ್ತು ಯೋಜನೆಯ ಸದಸ್ಯರಾಗಿರುವ ಕಾರ್ಮಿಕರ ಕಲೆ, ಕ್ರೀಡೆ ಮತ್ತು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ವಿಶೇಷ ಪುರಸ್ಕಾರವನ್ನು ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲು ಸಮಿತಿ ತೀರ್ಮಾನಿಸಿತು. ಸರ್ಕಾರದ ಅನುಮೋದನೆಯೊಂದಿಗೆ ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯಲ್ಲಿ ಸದಸ್ಯರಾಗಿರುವ ಕಾರ್ಮಿಕರಿಗೆ ಸವಲತ್ತುಗಳನ್ನು ಹೆಚ್ಚಿಸುವ ಮೂಲಕ ಯೋಜನೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಕೆ.ಕೆ ದಿವಾಕರನ್ ತಿಳಿಸಿದ್ದಾರೆ.
ಉಚಿತ ಅಧ್ಯಯನ ಸಾಮಗ್ರಿ ಕಿಟ್ ವಿತರಣೆ
0
ಜುಲೈ 31, 2022