HEALTH TIPS

ಬಾಕ್ರ ಬೈಲ್ ಶಾಲೆಯಲ್ಲಿ ಪಿ. ಟಿ. ಎ . ಮಹಾಸಭೆ

         ಮಂಜೇಶ್ವರ:  ಬಾಕ್ರಬೈಲು ಎ ಯು ಪಿ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದ ಪಿ ಟಿ ಎ ಮಹಾ ಸಭೆ ಇತ್ತೀಚೆಗೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಪಿ ಟಿ ಎ ಅಧ್ಯಕ್ಷ  ಅಬೂಬಕರ್ ಸಿದ್ದಿಕ್ ವಹಿಸಿದ್ದರು. ಪಾತೂರು ವಾರ್ಡ್ ಸದಸ್ಯ  ಅಬ್ದುಲ್ ಮಜೀದ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ  ಪಿ. ಬಿ. ಶ್ರೀನಿವಾಸ ರಾವ್ ಸ್ವಾಗತಿಸಿ ಲೆಕ್ಕಪತ್ರ ಮಂಡಿಸಿದರು. ದೀಪಾ ಟೀಚರ್ 2021-22 ನೇ ಸಾಲಿನ ವರದಿ ವಾಚಿಸಿದರು. ಬ್ಲಾಕ್ ಪಂಚಾಯತ್ ಸದಸ್ಯ ಮೊಯ್ದೀನ್ ಕುಂಞ, ಪಂಚಾಯತಿ ಮಾಜಿ ಅಧ್ಯಕ್ಷ ಪಿ ಬಿ ಅಬೂಬಕ್ಕರ್, ಸಭಾಂಗಣ ಸಮಿತಿ ಉಪಾಧ್ಯಕ್ಷ ಶಂಕರನಾರಾಯಣ ಭಟ್, ಪ್ರಬಂಧಕ ಪ್ರತಿನಿಧಿ ರಾಮಪ್ರಸಾದ್, ಎಸ್. ಎಸ್ .ಜಿ ಸದಸ್ಯ ಇಸ್ಮಾಯಿಲ್ ಪಾತೂರು ಶುಭ ಹಾರೈಸಿದರು. 

               ಈ ಶೈಕ್ಷಣಿಕ ವರ್ಷದ ಪಿ ಟಿ ಎ ಅಧ್ಯಕ್ಷ ಅಬ್ದುಲ್ ಮಜೀದ್ ಬಿ ಎ , ಉಪಾಧ್ಯಕ್ಷರಾಗಿ ಶಂಕರನಾರಾಯಣ ಭಟ್ ನಡಿಬೈಲು, ಎಂ ಪಿ ಟಿ ಎ ಅಧ್ಯಕ್ಷೆಯಾಗಿ ಶಶಿಕಲಾ, ಉಪಾಧ್ಯಕ್ಷೆಯಾಗಿ ಆಮಿನ ಆಯ್ಕೆಯಾದರು. ಈ ಶೈಕ್ಷಣಿಕ ವರ್ಷದ ಅಕಾಡೆಮಿಕ್ ಮಾಸ್ಟರ್ ಪ್ಲಾನ್ ನ್ನು ನೂತನ ಅಧ್ಯಕ್ಷರು  ಉದ್ಘಾಟಿಸಿದರು.  ಅಧ್ಯಾಪಕ ಮೋಹನ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.ನೌಕರ ಸಂಘದ ಕಾರ್ಯದರ್ಶಿ ಅಬ್ದುಲ್ ಕರೀಂ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries