ಪಾಲಕ್ಕಾಡ್: ರಾಜ್ಯದಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ ಎಂದು ಮಿಲ್ಮಾ ಹೇಳಿದೆ. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳ ಬೆಲೆಯಲ್ಲಿ ಶೇ 5ರಷ್ಟು ಏರಿಕೆಯಾಗಲಿದೆ. ಬೆಲೆ ಏರಿಕೆ ನಾಳೆಯಿಂದ ಜಾರಿಗೆ ಬರಲಿದೆ ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಮಾಹಿತಿ ನೀಡಿದ್ದಾರೆ.
ಎಷ್ಟು ರೂಪಾಯಿ ಏರಿಕೆಯಾಗಲಿದೆ ಎಂಬುದು ಶೀಘ್ರ ತಿಳಿಸಲಾಗುವುದೆಂದು ಮಿಲ್ಮಾ ಅಧ್ಯಕ್ಷರು ತಿಳಿಸಿದ್ದಾರೆ.
ಪ್ಯಾಕ್ ಮಾಡಿದ ಮಜ್ಜಿಗೆ ಮತ್ತು ಮೊಸರಿನ ಮೇಲೆ 5 ಶೇ. ತೆರಿಗೆ ವಿಧಿಸಿದ ಜಿಎಸ್‍ಟಿ ಕೌನ್ಸಿಲ್ ನಿರ್ಧಾರದ ಹಿನ್ನೆಲೆಯಲ್ಲಿ ಮಿಲ್ಮಾ ತರಾತುರಿಯಲ್ಲಿ ಬೆಲೆಯನ್ನು ಹೆಚ್ಚಿಸಿದೆ. ಕಳೆದ ತಿಂಗಳಾಂತ್ಯದಲ್ಲಿ ನಡೆದ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಧಾರ ನಾಳೆಯಿಂದ ಜಾರಿಗೆ ಬರಲಿದೆ.
ಪ್ಯಾಕೇಜ್ಡ್ ಮಾಂಸ, ಮೀನು, ಜೇನುತುಪ್ಪ, ಬೆಲ್ಲ ಮತ್ತು ಹಪ್ಪಳದ ಮೇಲೆ ಶೇ 5ರಷ್ಟು ತೆರಿಗೆ ನಾಳೆಯಿಂದ ಜಾರಿಗೆ ಬರಲಿದೆ. ಆಹಾರ ಪದಾರ್ಥಗಳಿಗೆ ಇನ್ನು ಜಿ.ಎಸ್.ಟಿ ಅನ್ವಯಿಸುತ್ತದೆ.