ನವದೆಹಲಿ: ಫ್ರಿಜ್, ಎಸಿ, ಮೈಕ್ರೊವೇವ್, ವಾಷಿಂಗ್ ಮೆಷಿನ್ಗಳ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗುವ ಸಾಧ್ಯತೆ ಇದೆ. ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಜಾಗತಿಕ ಸರಕುಗಳ ಬೆಲೆ ಕಡಿಮೆಯಾಗುತ್ತಿದ್ದು, ಕಂಪನಿಗಳು ಉತ್ಪಾದನಾ ವೆಚ್ಚದ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ.

ಹೋಲಿಸಿದರೆ ಈಗ ತಾಮ್ರವು ಶೇ. 21ರಷ್ಟು, ಉಕ್ಕು ಶೇ. 19 ಮತ್ತು ಅಲ್ಯುಮಿನಿಯಂ ಬೆಲೆ ಶೇ. 36ರಷ್ಟು ಕಡಿಮೆಯಾಗಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ನ ಇತ್ತೀಚಿನ ವರದಿ ತಿಳಿಸಿದೆ. ಸರಕುಗಳ ಬೆಲೆ ಕುಸಿತವು ಕಂಪನಿಗಳ ಮಾರ್ಜಿನ್ ಹೆಚ್ಚಿಸುವ ಜತೆಗೆ ಒಟ್ಟಾರೆ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯವಾಗಲಿದೆ. ಕಂಪನಿಗಳು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ತಮ್ಮ ಸರಕುಗಳ ಬೆಲೆಯನ್ನು ಹೆಚ್ಚಿಸಿದ್ದವು. ಕಳೆದ 2 ವರ್ಷಗಳಲ್ಲಿ ಸಂಚಿತ ಬೆಲೆ ಏರಿಕೆಯು ಶೇ. 20ಕ್ಕಿಂತ ಹೆಚ್ಚಾಗಿದೆ. ಹಾಗಾಗಿ ದರ ಇಳಿಕೆ ಅಗತ್ಯವಿದೆ ಎಂದು ಐಸಿಐಸಿಐ ಹೇಳಿದೆ. ಮಾರ್ಜಿನ್ ಹೆಚ್ಚಳದಿಂದಾಗಿ ಎಸಿ, ರೆಫ್ರಿಜರೇಟರ್, ಮೈಕ್ರೊವೇವ್ ಮತ್ತು ವಾಷಿಂಗ್ ಮೆಷಿನ್ಗಳ ತಯಾರಕರು ಗ್ರಾಹಕರಿಗೆ ರಿಯಾಯಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ಸಾಧ್ಯವಾಗುತ್ತದೆ. ಇನ್ನೊಂದು ತಿಂಗಳಲ್ಲಿ ಹಬ್ಬದ ಋತು ಶುರುವಾಗಲಿದ್ದು, ಗ್ರಾಹಕರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ಐಸಿಐಸಿಐ ಅಭಿಪ್ರಾಯಪಟ್ಟಿದೆ.