ತ್ರಿಶೂರ್: ಲಿಂಗ ಸಮಾನತೆ ಬಗೆಗಿನ ತರಗತಿ ವೇಳೆ ಪುರುಷ ಸ್ತ್ರೀಯರ ನಡುವೆ ಬಟ್ಟೆ ಕಟ್ಟಿ ಪ್ರತ್ಯೇಕ ತರಗತಿ ನಡೆಸಿರುವ ಘಟನೆಯ ವಿವಾದದ ಬಳಿಕ ಕಾಲೇಜು ವಿವರಣೆ ನೀಡಿದೆ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೂ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಲೇಜು ಅಧಿಕಾರಿಗಳು ಮತ್ತು ಒಕ್ಕೂಟ ಸ್ಪಷ್ಟಪಡಿಸಿದೆ. ಕಾಲೇಜು ಕ್ಯಾಂಪಸ್ ಒಳಗೆ ಕಾರ್ಯಕ್ರಮ ನಡೆಯದೇ ಕ್ಯಾಂಪಸ್ ಸಮೀಪದ ಧಾರಾಲ್ ಕುರಾನ್ ಸೆಂಟರ್ ಎಂಬ ಸ್ಥಳದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದೆ.
ಮುಜಾಹಿದ್ ವಿಸ್ಡಮ್ ಗ್ರೂಪ್ ನ ಸಾಂಸ್ಥಿಕ ಕಾರ್ಯಕ್ರಮವಾಗಿದ್ದು, ಆ ಕಾರ್ಯಕ್ರಮದಲ್ಲಿ ತರಗತಿ ನಡೆದಿದ್ದು, ಸಂಸ್ಥೆಯ ಸದಸ್ಯರಾದ ವಿದ್ಯಾರ್ಥಿಗಳು ತರಗತಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳು ಮತ್ತು ಸಮಸ್ಯೆ, ಇಸ್ಲಾಮಿಕ್ ದೃಷ್ಟಿಕೋನ, ಲಿಂಗ ರಾಜಕೀಯ ಮತ್ತು ಅದರ ಹಿಂದಿನ ಜೀವನ ಮತ್ತು ಆಲೋಚನೆಗಳ ಕುರಿತು ಚರ್ಚೆಗಳು ನಡೆದವು.
ತರಗತಿ ತೆಗೆದುಕೊಳ್ಳಲು ಬಂದಿದ್ದ ಶಿಕ್ಷಕರು ಕಾರ್ಯಕ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗಾಗಲೇ ಚಿತ್ರಕ್ಕೆ ಹಲವರು ಟೀಕೆ ಮಾಡಿದ್ದಾರೆ. ಬದಲಾವಣೆಗಳು ಬೇಡುವ ಕಾಲದಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ಹೇಯಕರ ಎಂದು ಬಹುತೇಕ ಜನರುÀ ಪ್ರತಿಕ್ರಿಯಿಸಿದ್ದಾರೆ.