ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ
ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ॥'
ಶಿಷ್ಯನ ಅಜ್ಞಾನವೆಂಬ ಕಣ್ಣು ಬೇನೆಯನ್ನು ಜ್ಞಾನವೆಂಬ ಅಂಜನದಿಂದ ಗುಣಪಡಿಸಿ ಅವನ ಕೀರ್ತಿ ಎಲ್ಲೆಡೆ ಹರಡುವಂತೆ ಮಾಡಿದ ಶ್ರೀ ಗುರುವಿಗೆ ನಮಸ್ಕಾರಗಳು.
ಪ್ರತಿವರ್ಷ
ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಬರುವುದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ
ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನ ಎಂದು ಪ್ರತೀತಿ. ವೇದವು ಮೊದಲು ಒಂದೇ
ಆಗಿತ್ತು. ಅದನ್ನು 4 ಭಾಗಗಳಾಗಿ ವಿಂಗಡಿಸಿದವರು ವೇದವ್ಯಾಸರು. ವ್ಯಾಸ ಎಂದರೆ
ವಿಂಗಡಿಸುವ ಎಂಬ ಅರ್ಥವಿದೆ. ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು.
ಯಾವುದೇ
ವಿದ್ಯೆಯನ್ನು ಕಲಿಯಬೇಕಾದರೆ ಗುರುವಿನ ಪಾತ್ರ ಬಹಳ ಮುಖ್ಯ. ಗು ಎಂದರೆ ಅಜ್ಞಾನ, ರು
ಎಂದರೆ ಹೋಗಲಾಡಿಸುವವನು, ಯಾರು ನಮ್ಮ ಅಜ್ಞಾನವನ್ನು ಹೋಗಲಾಡಿಸುವನೋ ಅವನೇ ಗುರು.
ಮುಖ್ಯವಾಗಿ 5 ಬಗೆಯ ಗುರುಗಳಿರುವರು. ಉಪನಯನ ಮಾಡಿದವನು, ವಿದ್ಯೆ ಕಲಿಸಿದವನು,
ಅನ್ನದಾತ, ಭಯದಲ್ಲಿ ರಕ್ಷಿಸಿದವನು, ತಂದೆಯಾದವನು.
ಎಲ್ಲಾ ಕಾರ್ಯಗಳಿಗೆ ಮೊದಲು
ಗುರುಪೂಜೆ ಮಾಡಿಯೇ ತೀರಬೇಕು. ವೇದ ಮಂತ್ರಗಳನ್ನು ಹೇಳುವಾಗ ಮೊದಲು ಶ್ರೀ ಗುರುಭ್ಯೋನಮಃ
ಹರಿಃ ಓಂ ಎಂದು ಹೇಳಿಯೇ ಪ್ರಾರಂಭಿಸಬೇಕು.
ಎಲ್ಲಾ ಮಾನವ ಜಾತಿಗೆ ಮೂರು ಶಬ್ದಗಳ ಮೂಲಕ
ದಾರಿಯನ್ನು ತೋರಿಸಿದ್ದಾರೆ. ಅವು ಯಾವುವು ಎಂದರೆ 'ನಹಿ ಜ್ಞಾನೇನ ಮುಕ್ತಿಃ' ಅಂದರೆ
ಜ್ಞಾನವಿಲ್ಲದೆ ಮುಕ್ತಿ ಇಲ್ಲವೆಂದು. ಮಾನವನು ಜನ್ಮಜನ್ಮಾಂತರದಿಂದ ಕರ್ಮ ಸಂಸ್ಕಾರಗಳ
ಜಂಜಾಟದೊಳಗೆ ಮುಳುಗಿದ್ದಾನೆ.
ಎಲ್ಲಿಯವರೆಗೆ ಕರ್ಮ ಬಂಧನದಿಂದ ಮುಕ್ತಿ ಇಲ್ಲವೋ
ಅಲ್ಲಿಯ ವರೆಗೆ ಈ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಇದನ್ನು ಸದ್ಗುರು ಜ್ಞಾನವೆಂಬ
ಕತ್ತರಿಯಿಂದ ತೆಗೆದು ಹಾಕಲು ಸಾಧ್ಯ. ಜ್ಞಾನವನ್ನು ಕೊಡುವವನೇ ಗುರು. ಜ್ಞಾನ ಎಂದರೆ,
ನಮ್ಮ ಬುದ್ಧಿ. ಮತ್ತೆ ಕೆಲವರು ಕೆಲವು ಶಾಸ್ತ್ರಗಳಲ್ಲಿರುವ ಶಬ್ದವನ್ನು ಜ್ಞಾನ
ಎನ್ನುವರು. ಇವುಗಳೆಲ್ಲಾ ನಮ್ಮ ಪಂಚೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನ.
ಆದರೆ
ಮಹಾಜ್ಞಾನಿಗಳು ಆಂತರಿಕ ಜ್ಞಾನವೆಂದು ಹೇಳಿದ್ದಾರೆ. ಅಂದರೆ ನಾನು. ನಾನು ಯಾರೆಂದು
ತಿಳಿಯುವುದೇ ಜ್ಞಾನ. ಭಗವಾನ್ ರಮಣ ಮಹರ್ಷಿಗಳೂ ಸಹ ಇದನ್ನೇ ಹೇಳಿರುವುದು. ಇದನ್ನು
ತಿಳಿಯಲು ಸರಿಯಾದ ಸದ್ಗುರು ಬೇಕಾಗುವುದು. ಆದ್ದರಿಂದಲೇ ಪುರಂದರ ದಾಸರು ಈ ರೀತಿ
ಹೇಳಿರುವುದು. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು.
ಮಂತ್ರ, ಪೂಜೆ,
ದೇವರು ವಿಷಯವಾಗಿ ತಿಳಿಸುವವನು ಶಿಕ್ಷಾಗುರು. ಆಧ್ಯಾತ್ಮಿಕ ಸದ್ಗುರುಗಳು ಪರಮಾತ್ಮನ
ಸಾಕ್ಷಾತ್ಕಾರ ಮಾಡಿಸುತ್ತಾರೆ. ಈ ಬಾರಿ ಇದೇ ಜುಲೈ 13 ಇಂದು ರಂದು ಗುರುಪೂರ್ಣಿಮೆ ಅಥವಾ
ವ್ಯಾಸ ಪೂರ್ಣಿಮೆ.
ಕೇವಲ ಜ್ಞಾನದ ಬೆಳಕ ತೋರ್ಪ ಗುರುವು ಮಾತ್ರ ಪರಬ್ರಹ್ಮ: ಇಂದು ಗುರು ಪೂರ್ಣಿಮಾ
0
ಜುಲೈ 13, 2022
Tags