ಪೆರ್ಲ: ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಒಂದು ವರ್ಷ ಒಂದು ಲಕ್ಷ ಉದ್ಯಮ ಪದ್ಧತಿಯ ಅಂಗವಾಗಿ ಸ್ಥಳೀಯಾಡಳಿತ ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ.ಪ್ರತಿ ಪಂಚಾಯತುಗಳಲ್ಲಿ ಸೋಮವಾರ ಹಾಗೂ ಬುಧವಾರದಂದು ಕಾರ್ಯಚರಿಸುವ ಈ ಹೆಲ್ಫ್ ಡೆಸ್ಕ್ ನಲ್ಲಿ ನೂತನ ಉದ್ಯೋಗ ಸಹಾಯಕ ಮಾಹಿತಿ,ನೊಂದಾವಣೆ ಹಾಗೂ ಕೈಗಾರಿಕ ಇಲಾಖೆಯ ಇಂಟರ್ನ್ ಸೇವೆಗಳು,ಸೂಕ್ತ ಮಾಹಿತಿ ಮಾರ್ಗದರ್ಶನ ಲಭಿಸುವುದಾಗಿದೆ.
ಎಣ್ಮಕಜೆ ಪಂಚಾಯತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿ ಹೆಲ್ಫ್ ಡೆಸ್ಕ್ ಗೆ ಚಾಲನೆ ನೀಡಿದರು. ಪಂ.ಆರೋಗ್ಯ,ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್,ಪಂ.ಸದಸ್ಯ ಮಹೇಶ್ ಭಟ್ ಪಂ.ಕಾರ್ಯದರ್ಶಿ ಅನ್ವರ್ ಅಹಮ್ಮದ್,ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ಕೈಗಾರಿಕಾ ಇಲಾಖೆಯ ಋತಿಕ್ ಭಾಗವಹಿಸಿದ್ದರು.