ತಿರುವನಂತಪುರ: ಆರೆಸ್ಸೆಸ್ ಮಾಜಿ ಸರ ಸಂಘಚಾಲಕ್ ಮಾಧವ ಸದಾಶಿವ ಗೋಳ್ವಾಲ್ಕರ್ ಅವರನ್ನು ಸಾಜಿ ಚೆರಿಯನ್ ಅವರ ಅಸಂವಿಧಾನಿಕ ಹೇಳಿಕೆಗೆ ಹೋಲಿಸಿದ ವಿಪಕ್ಷ ನಾಯಕ ವಿಡಿ ಸತೀಶನ್ ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸದಾನಂದನ್ ಮಾಸ್ತರ್ ಪ್ರತಿಕ್ರಿಯಿಸಿದ್ದಾರೆ. ವಿಡಿ ಸತೀಶನ್ ಅವರ ಹಳೆಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಸದಾನಂದನ್ ಮಾಸ್ತರ್ ಅವರು ಹಲವನ್ನು ನೆನಪಿಸಿದ್ದಾರೆ. ಕೆಲವರ ಆತ್ಮವಂಚನೆಯ ಆಳವನ್ನು ಅರಿಯಲು ಚಿತ್ರಗಳು ನೆರವಾಗುತ್ತವೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಹಳೆ ಚಿತ್ರಗಳನ್ನು ಶೇರ್ ಮಾಡುವ ಮೂಲಕ ಮಾಸ್ತರ್ ಸತೀಶನ್ ಅವರ ದ್ವಂದ್ವವನ್ನು ಬಯಲಿಗೆಳೆಯುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗಿದೆ.
2013ರಲ್ಲಿ ತ್ರಿಶೂರ್ ಎಲೈಟ್ ಇಂಟರ್‍ನ್ಯಾಶನಲ್‍ನಲ್ಲಿ ನಡೆದ 'ಸ್ವಾಮಿ ವಿವೇಕಾನಂದ ಮತ್ತು ಪ್ರಬುದ್ಧ ಕೇರಳ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ವಿ.ಡಿ.ಸತೀಶನ್ ಭಾಗವಹಿಸಿದ್ದ ಚಿತ್ರಗಳನ್ನು ಸದಾನಂದನ್ ಮಾಸ್ತರ್ ಹಂಚಿಕೊಂಡಿದ್ದಾರೆ. ಅಂದು ಭಾರತೀಯ ವಿಚಾರಕೇಂದ್ರದ ಜಿಲ್ಲಾ ಸಭೆಯೂ ನಡೆಯಿತು. ಕಾರ್ಯಕ್ರಮಕ್ಕೆ ಶಾಸಕ ವಿ.ಡಿ.ಸತೀಶನ್ ಅತಿಥಿಯಾಗಿ ಆಗಮಿಸಿದ್ದರು ಎಂದು ಸದಾನಂದನ್ ಮಾಸ್ತರ್ ಹೇಳುತ್ತಾರೆ. ಆರ್ ಎಸ್ ಎಸ್ ಪ್ರಚಾರಕ ಶ್ರೀ ಜೆ.ನಂದಕುಮಾರ್, ವಿಚಾರಕೇಂದ್ರದ ಅಂದಿನ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಎಸ್ ಪ್ರಚಾರಕ ಕ.ಭಾ ಸುರೇಂದ್ರನ್, ಸಾಹಿತ್ಯ, ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಮುಖಂಡರಾದ ಸ್ವಾಮಿ ಸದ್ಭಾವಾನಂದಜಿ, ಆಶಾ ಮೆನನ್, ಡಾ. ಲಕ್ಷ್ಮೀ ಕುಮಾರಿ, ಡಾ. ಸುಮಂಗಲಾ, ವಿಚಾರ ಕೇಂದ್ರದ ರಾಜ್ಯಾಧ್ಯಕ್ಷ ಡಾ. ಎಂ.ಮೋಹನದಾಸ್ ಮತ್ತಿತರರು ವೇದಿಕೆ ಹಂಚಿಕೊಂಡಿದ್ದರು.
ಇಂದಿನ ವಿರೋಧ ಪಕ್ಷದ ನಾಯಕರು ತಮ್ಮ ಸುದೀರ್ಘ ಭಾಷಣದಲ್ಲಿ ವಿಚಾರ ಕೇಂದ್ರ, ಸ್ವಾಮಿ ವಿವೇಕಾನಂದ ಮತ್ತು ಸಾತ್ವಿಕ ಮೇಧಾವಿ ಪರಮೇಶ್ವರಜಿ ಪ್ರತಿನಿಧಿಸುವ ಭಾರತೀಯ ದರ್ಶನಗಳ ಬಗ್ಗೆ ಸುಂದರವಾಗಿ ಮಾತನಾಡಿದರು ಎಂದು ಮಾಸ್ತರ್ ಸದಾನಂದನ್ ಹೇಳಿದ್ದಾರೆ. ನಕಲಿ ಸೆಕ್ಯುಲರಿಸಂ ಬಗ್ಗೆಯೂ ಸತೀಶನ್ ಟೀಕಿಸಿದ್ದಾರೆ ಎಂದು ಅವರು ಹೇಳುತ್ತಾರೆ. ಇಂದಿನ ಸತೀಶನ್ ಅಂದು ಕಂಡ ಸತೀಶನಲ್ಲ. ಸತೀಶನ್ ಅವರು ಸಾಜಿ ಚೆರಿಯನ್ ಅವರ ಸಂವಿಧಾನ ವಿರೋಧಿ ಭಾಷಣವನ್ನು ಪೂಜನೀಯ ಗುರೂಜಿಯವರ ಟೀಕೆಗಳಿಗೆ ಹೋಲಿಸಿದ್ದಾರೆ. ಗುರೂಜಿಯವರ ಆಲೋಚನೆಗಳು ದೇಶದ್ರೋಹವೇ ಆಗಿದ್ದರೆ ಆ ದರ್ಶನಗಳನ್ನು ಸಿದ್ಧಾಂತವನ್ನಾಗಿ ಸ್ವೀಕರಿಸಿದ ಭಾರತೀಯ ವಿಚಾರ ಕೇಂದ್ರದ ಸಮಾರಂಭಕ್ಕೆ ಸತೀಶನ್ ಅÀವರು ಮುಖ್ಯ ಅತಿಥಿಯಾಗಿ ಏಕೆ ಹಾಜರಾಗಿದ್ದರು ಎಂದು ಮಾಸ್ತರ್ ಸದಾನಂದನ್ ಕೇಳಿದ್ದಾರೆ. ಜೆ.ನಂದಕುಮಾರ್ ಅವರೊಂದಿಗೆ ಕೇಸರಿ ವಾರಪತ್ರಿಕೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಲೀಗ್ ಮುಖಂಡ ಕೆ.ಎನ್.ಎ.ಖಾದರ್ ಅವರನ್ನು ಅಭಿನಂದಿಸಿದವರಲ್ಲಿ ಸತೀಶನ್ ಸೇರಿದ್ದಾರೆ. ಸತೀಶನ್ ಗೆ ಯಾಕೆ ಬಣ್ಣ ಬದಲಾಯಿಸುವರು, ಹೀಗೇಕೆ ಎಂದು ಕೇಳಿದ್ದಾರೆ.