ಕುಂಬಳೆ : ಇಲ್ಲಿನ ಸೂರಂಬೈಲು ಶ್ರೀ ಗಣೇಶ ಭಜನ ಮಂದಿರದಲ್ಲಿ ಚೌತಿ ಕಾರ್ಯಕ್ರಮವು ಆಗಸ್ಟ್ 31 ರಂದು ನಡೆಯಲಿದ್ದು ಇತ್ತೀಚೆಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ವಸಂತ ಕುಮಾರ ಸಿ.ಕೆ. ಇವರ ಅಧ್ಯಕ್ಷತೆಯಲ್ಲಿ ಹಿರಿಯ ಸದಸ್ಯ ಆನಂದ ಭಂಡಾರಿ ಸೂರಂಬೈಲು ಪತ್ರಿಕೆ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಉಪಾಧ್ಯಕರಾದ ಸಂಜೀವ ಭಂಡಾರಿ ಕುಂಬಳೆ, ಕೋಶಾಧಿಕಾರಿ ಸತ್ಯನಾರಾಯಣ ಬದಿಯಡ್ಕ, ರಾಜೇಶ ಶೇಣಿ, ಕೆ. ಪಿ ಭಂಡಾರಿ ನಾಯ್ಕಾಪು, ರಾಘವ ಭಂಡಾರಿ ಅಣೆಬೈಲು ಉಪಸ್ಥಿತರಿದ್ದರು. ಕಾರ್ಯದರ್ಶಿ ಉದನೇಶ್ವರ ಬದಿಯಡ್ಕ ಸ್ವಾಗತಿಸಿ, ವಿನೋದ್ ಕುಂಟಾರು ವಂದಿಸಿದರು.
ಚೌತಿ ಮಹೋತ್ಸವದ ಭಾಗವಾಗಿ ಬೆಳಗ್ಗೆ ಗಣಹೋಮ ಗಂಟೆ 11 ರಿಂದ ಯಕ್ಷಗಾನ ತಾಳಮದ್ದಳೆ ಮಧ್ಯಾಹ್ನ ಮಹಾಪೂಜೆ ಅನ್ನದಾನ, ಅಪರಾಹ್ನ 3ರಿಂದ ಯಕ್ಷಗಾನ ಬಯಲಾಟ, ಸಂಜೆ 7 ರಿಂದ ಭಜನೆ ನಡೆಯಲಿದೆ.
ಚೌತಿ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಜುಲೈ 30, 2022