HEALTH TIPS

ಯುವಮೋರ್ಚಾ ನೇತೃತ್ವದಲ್ಲಿ ಅಗ್ನಿಪಥ್ ನೊಂದಾವಣೆ ಶಿಬಿರ

                 ಬದಿಯಡ್ಕ: ಯುವ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ್ ಯೋಜನೆಯ ನೋಂದಾವಣೆ ಶಿಬಿರ ಬಿಜೆಪಿ ಕಾಸರಗೋಡು ಮಂಡಲ ಕಛೇರಿಯಲ್ಲಿ ನಡೆಯುತ್ತಿದ್ದು, ಅನೇಕ ಯುವಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. 

              ಸಶಸ್ತ್ರ ಪಡೆಗಳ ಯುವ ಪ್ರೊಪೈಲ್  ಅನ್ನು ಸಕ್ರಿಯಗೊಳಿಸಲು ಅಗ್ನಿಪಥ್ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಸಮಕಾಲೀನ ತಾಂತ್ರಿಕ ಕಾರ್ಯಗಳಿಗೆ ಹೆಚ್ಚು ಹೊಂದಿಕೊಳ್ಳುವ, ನುರಿತ, ಶಿಸ್ತುಬದ್ಧ ಪ್ರೇರೇಪಿತ ಮಾನವಶಕ್ತಿಯನ್ನು ಸಮಾಜಕ್ಕೆ ಮರಳಿಸುವ ಮೂಲಕ ಯುವ ಪ್ರತಿಭೆÉಗಳನ್ನು ಆಕರ್ಷಿಸಿ, ಸಮವಸ್ತ್ರ ಧರಿಸಲು ಉತ್ಸುಕರಾಗಿರುವ ಯುವಕರಿಗೆ ಇದು ಒಂದು ಅವಕಾಶವನ್ನು ಒದಗಿಸುತ್ತದೆ. 

                 ಅಗ್ನಿಪಥ್ ಯೋಜನೆಯನ್ನು ವಿರೋಸಿ ವ್ಯಾಪಕ ಪ್ರತಿಭಟನೆ ನಡೆದಿತ್ತಾದರೂ ಭಾರತೀಯ ವಾಯುಪಡೆ (ಐಎಎಫ್) ಗೆ ಈ ಬಾರಿ ಅಗ್ನಿಪಥ್ ಯೋಜನೆಯಡಿ ಸೇರಲು ದಾಖಲೆಯ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ವಾಯುಪಡೆ ತಿಳಿಸಿದೆ. ಈ ವರೆಗೂ 7.5 ಲಕ್ಷ ಅರ್ಜಿಗಳು ಬಂದಿದ್ದು, ನೇಮಕಾತಿ ಪ್ರಕ್ರಿ0iÉುಯ ಇತಿಹಾಸದಲ್ಲೇ ಇದು ಗರಿಷ್ಠ ಸಂಖ್ಯೆಯ ಅರ್ಜಿ ಎಂದು ಐಎಎಫ್ ಹೇಳಿದೆ. ಯೋಜನೆಯಡಿ ನೇಮಕಾತಿಗಾಗಿ ನೋಂದಣಿ ಜೂ.24 ರಂದು ಪ್ರಾರಂಭವಾಗಿ, ಜು.05 ರಂದು ಅಂತ್ಯಗೊಂಡಿತ್ತು. ಜೂ.14 ರಂದು ಯೋಜನೆಯನ್ನು ಘೋಷಿಸಿದಾಗ ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ತೀವ್ರವಾದ ಪ್ರತಿಭಟನೆಗಳು ನಡೆದಿದ್ದವು. ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಬಿಹಾರದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಗಿತ್ತು. ಆದರೂ ದೇಶದಲ್ಲಿ ಮತ್ತು ಕಾಸರಗೋಡು ಜಿಲ್ಲೆಯ ಯುವಕ ಯುವತಿಯರು ತಂಡೋಪತಂಡವಾಗಿ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

               ಕಳೆದ 12 ದಿನಗಳಿಂದ  ಕಾರ್ಯಾಚರಿಸುತ್ತಿರುವ  ಸಹಾಯ ಕೇಂದ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ಯೋಜನೆಯ ಮೂಲಕ ಕಾಸರಗೋಡು ಜಿಲ್ಲೆಯಲ್ಲಿರುವ ಯುವಕರನ್ನು ಸೇನೆಗೆ ಸೇರಲು ಎಲ್ಲಾ ರೀತಿಯ ಸಹಕಾರವನ್ನು ಯುವ ಮೋರ್ಚಾ ಕಾಸರಗೋಡು ನೀಡುತ್ತಿದೆ. ಪ್ರಸ್ತುತ ನೌಕಾಪಡೆ ಮತ್ತು ಭೂಸೇನೆಯ ನೋಂದಾವಣಿ ಪ್ರಕ್ರಿ0iÉುಯು ನಡೆಯುತ್ತಿದ್ದು, ಸಹಾಯ ಕೇಂದ್ರದ ಮೂಲಕ ಸಲಹೆಯನ್ನು ಪಡೆಯಬಹುದೆಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 9846836417 ಸಂಖ್ಯೆಗೆ ಕರೆಮಾಡಲು ತಿಳಿಸಲಾಗಿದೆ. 


             ಅಭಿಮತ: 

            ಕಾಸರಗೋಡು ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಅನೇಕ ಯುವಕ ಯುವತಿಯರು ವಿಧ್ಯಾಭ್ಯಾಸ, ಆರೋಗ್ಯ, ಉದ್ಯೋಗಕ್ಕಾಗಿ ನೆರೆ ರಾಜ್ಯಗಳನ್ನು ಅವಲಂಬಿಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ತರುಣರ ಭವಿಷ್ಯವನ್ನು ಮುಂದಿಟ್ಟುಕೊಂಡು ಸೈನ್ಯಕ್ಕೆ ಸೇರಲು ಉತ್ಸುಕರಾಗಿರುವವರಿಗೆ ಬೆಂಬಲ ನೀಡುವುದಕ್ಕಾಗಿ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಉದ್ಯೋಗಾಕಾಂಕ್ಷಿಗಳನ್ನು ಕಂಡಾಗ ಕಾಸರಗೋಡಿನಲ್ಲಿರುವ ನಿರುದ್ಯೋಗ ಸಮಸ್ಯೆ ಎಷ್ಟರಮಟ್ಟಿಗೆ ಇದೆ ಎಂದು ತಿಳಿಯುತ್ತದೆ. ಅಗ್ನಿಪಥ್ ಯೋಜನೆಯಲ್ಲಿ ಪಾಲ್ಗೊಳ್ಳಲು ಈ ಸಹಾಯ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ. 

                             - ರಕ್ಷಿತ್ ಕೆದಿಲಾಯ ಬದಿಯಡ್ಕ

                              ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯುವಮೋರ್ಚಾ ಕಾಸರಗೋಡು


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries