ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯನ್ನು ಸಂಸದ್ ಆದರ್ಶ್ ಗ್ರಾಮ ಯೋಜನೆಗೊಳಪಡಿಸಿ 'ಸಾಗಿ' ಯೋಜನೆ ಘೋಷಣೆ ಹಾಗೂ ವಿ.ಡಿ.ಪಿ. ಬಿಡುಗಡೆಯನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನೇರೆವೇರಿಸಿದರು.
ಈ ಬಗ್ಗೆ ಪಂಚಾಯತಿ ಸಭಾಂಗಣದಲ್ಲಿ ಜರಗಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದರು, "ಎಣ್ಮಕಜೆಯನ್ನು ಸ್ವಾವಲಂಬನೆಯುತವಾಗಿಯೂ, ಸಾಮಾಜಿಕವಾಗಿ ಸುದೃಢಗೊಳಿಸಲು 'ಸಾಗಿ' ಯೋಜನೆಯು ಸಹಾಯಕವಾಗಲಿದೆ. ಇದರ ಮೂಲಕ ಮೂಲಭೂತ ಸೌಕರ್ಯಗಳು ವೃದ್ಧಿಯಾಗುವುದರಲ್ಲದೆ ನಾಡನ್ನು ಆದರ್ಶವಾಗಿರಿಸಲು ಈ ಯೋಜನೆ ಫಲಪ್ರದವಾಗಲಿ" ಎಂದರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿ ಮಾತನಾಡಿ, "ಯಾವುದೇ ಯೋಜನೆ ಜಾರಿಗೊಳ್ಳಬೇಕಾದರೂ ಜನಪ್ರತಿನಿಧಿಗಳ ಸಹಕಾರ ಮುಖ್ಯ. ಪಕ್ಷಭೇಧ ಮರೆತು ಒಟ್ಟಾಗಿ ದುಡಿದರೆ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯವಾಗಬಹುದು" ಎಂದರು. ಪಿಎಯು ಯೋಜನಾ ನಿರ್ದೇಶಕ ಕೆ.ಪ್ರದೀಪ್ ವಿಷಯ ಮಂಡಿಸಿದರು. ಸಾಗಿ ಯೋಜನೆಯ ಚಾರ್ಜ್ ಆಫೀಸರ್ ಕೆ.ವಿ.ಮುಹಮ್ಮದ್ ಮದನಿ ವಿ.ಡಿ.ಪಿ. ಮಂಡನೆಗೈದರು.
ಪಂ.ಉಪಾಧ್ಯಕ್ಷೆ ಡಾ. ಜಹನಾಸ್ ಹಂಸಾರ್, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್,ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಭಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ, ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಮ್ಲ, ರಾಧಾಕೃಷ್ಣ ನಾಯಕ್ ಶೇಣಿ, ಕುಸುಮಾವತಿ, ಉಷಾ ಕುಮಾರಿ, ಝರೀನಾ ಮುಸ್ತಾಫ, ಆಶಾಲತಾ ಸಭೆಯಲ್ಲಿ ಉಪಸ್ಥಿತರಿದ್ದರು.
ಪಂ.ಕಾರ್ಯದರ್ಶಿ ಅನ್ವರ್ ರಹಮಾನ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಬಿನೀಶ್ ಸಿ. ವಂದಿಸಿದರು. ನವಾಸ್ ಮತ್ರ್ಯ ಕಾರ್ಯಕ್ರಮ ನಿರೂಪಿಸಿದರು.