ಸಮರಸ ಚಿತ್ರಸುದ್ದಿ: ಬದಿಯಡ್ಕ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅರ್ಚಕ ಮಣಿಕಂಠ ಅಡಿಗಳಿಗೆ ಧನಸಹಾಯವನ್ನು ನೀಡಲಾಯಿತು. ಶ್ರೀ ಕ್ಷೇತ್ರದ ಕಾರ್ಯಕಾರೀ ಸಮಿತಿಯ ನೇತೃತ್ವದಲ್ಲಿ ಸಂಗ್ರಹಿಸಲಾದ ರೂ.25000ವನ್ನು ಸಮಿತಿಯ ಅಧ್ಯಕ್ಷ ಸೀತಾರಾಮ ರಾವ್ ಪಿಲಿಕೂಡ್ಲು ಹಸ್ತಾಂತರಿಸಿದರು. ಉಪಾಧ್ಯಕ್ಷ ರವಿಶಂಕರ ಪುಣಿಂಚಿತ್ತಾಯ, ಕಾರ್ಯದರ್ಶಿ ಸುನಿಲ್ ಕರೋಡಿ ಪುಂಡೂರು, ಖಜಾಂಜಿ ರಾಮಚಂದ್ರನ್ ವೋರ್ಕೋಡ್ಲು ಜೊತೆಗಿದ್ದರು.
ಗಾಯಗೊಂಡ ಅರ್ಚಕರಿಗೆ ಧನಸಹಾಯ ಹಸ್ತಾಂತರ
0
ಜುಲೈ 29, 2022