ಮಂಜೇಶ್ವರ: ಇಲ್ಲಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಇಬ್ಬರು ಮಹಿಳೆಯರನ್ನು ತಡೆದು ನಿಲ್ಲಿಸಿ ಮಾನಹಾನಿಗೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಓಡಿ ಪರಾರಿಯಾಗಿದ್ದಾನೆ. ಸ್ಥಳೀಯ ನಿವಾಸಿಗಳಾದ ವಿಜಿತ್ ಹಾಗೂ ಮುಸ್ತಫಾ ಬಂಧಿತರು. ಇವರ ಸಹಚರ ಕೌಶಿಕ್ ಪರಾರಿಯಾಗಿದ್ದಾನೆ. ಇವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಘಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಘಟನೆ ನಡೆದಿದ್ದು, ಕಾಲೇಜು ಸನಿಹದ ವಿಶ್ವ ವಿದ್ಯಾಲಯ ಕ್ಯಾಂಪಸ್ ನೌಕರರಾದ ಇಬ್ಬರು ಮಹಿಳೆಯರು ರೈಲ್ವೆ ನಿಲ್ದಾಣಕ್ಕೆ ನಡೆದುಹೋಗುವ ಮಧ್ಯೆ ಇವರನ್ನು ತಡೆದು ನಿಲ್ಲಿಸಿ, ಮೊಬೈಲಲ್ಲಿ ಇವರ ಫೋಟೋ ತೆಗೆಯಲು ಯತ್ನಿಸಿದ್ದಾರೆ. ಇದನ್ನು ಪ್ರತಿಭಟಿಸಿದಾಗ ಕೈಹಿಡಿದು ಎಳೆದಿದ್ದು ಬೊಬ್ಬಿಡುತ್ತಿದ್ದಂತೆ ಸ್ಥಳೀಯರು ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.