ತಿರುವನಂತಪುರ: ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗಳ ಒಳಉಡುಪು ಕಳಚಿದ ಘಟನೆಯಲ್ಲಿ ಐವರನ್ನು ಬಂಧಿಸಲಾಗಿದ್ದು, ಶಾಲೆಯ ನೌಕರರಾದ ಮರಿಯಮ್ಮ ಎಸ್, ಮರಿಯಮ್ಮ ಕೆ ಹಾಗೂ ಏಜೆನ್ಸಿ ಉದ್ಯೋಗಿಗಳಾದ ಜೋತ್ಸ್ನಾ, ಬೀನಾ, ಗೀತು ಎಂಬುವರನ್ನು ಬಂಧಿಸಲಾಗಿದೆ. ಪೋಲೀಸರು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ದೂರಿನ ತನಿಖೆಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸಮಿತಿಯನ್ನು ರಚಿಸಿದೆ. ಶಿಕ್ಷಣ ಸಚಿವಾಲಯವು ತನಿಖೆಯ ಭಾಗವಾಗಿ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ.
ಕೊಲ್ಲಂ ತಲುಪಲಿರುವ ತಂಡ ಘಟನೆಯ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸಲಿದೆ. ಕೇಂದ್ರ ಸಚಿವ ವಿ.ಮುರಳೀಧರನ್ ಮತ್ತು ಸಂಸದ ಎನ್.ಕೆ.ಪ್ರೇಮಚಂದ್ರನ್ ನಿನ್ನೆ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದಾರೆ.