ಇಡುಕ್ಕಿ : ಹೈಸ್ಕೂಲ್ ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ಮದ್ಯದೊಂದಿಗೆ ತರಗತಿ ಬಂದಿರುವುದು ಕಳವಳಕ್ಕೆ ಕಾರಣವಾಗಿದೆ. ಬಾಟಲಿಯ ಮುಚ್ಚಳ ಕಳಚಿದಾಗ ಅದು ತರಗತಿಯೆಲ್ಲ ಚೆಲ್ಲಲ್ಪಟ್ಟು ವಿದ್ಯಾರ್ಥಿಗಳ ಮೈಮೇಲೆ ಚಿಮ್ಮಿತು. ಘಟನೆ ಮುಜುಗರದ ಸಂಗತಿ ಎಂದು ಅರಿತ ವಿದ್ಯಾರ್ಥಿ ನಿಧಾನವಾಗಿ ಮನೆಗೆ ಕಾಲ್ಕಿತ್ತ.
ಇಡುಕ್ಕಿಯಲ್ಲಿ ಈ ಘಟನೆ ನಡೆದಿದೆ. ಗಂಜಿ ನೀರಿನಿಂದ ತಯಾರಿಸಿದ ಮದ್ಯವನ್ನು ಸ್ನೇಹಿತರಿಗೆ ತೋರಿಸಲು ಶಾಲೆಗೆ ವಿದ್ಯಾರ್ಥಿಯೋರ್ವ ತಂದಿದ್ದ. ಬ್ಯಾಗ್ ನಲ್ಲಿಟ್ಟಿದ್ದ ಬಾಟಲಿಯನ್ನು ನಿಧಾನವಾಗಿ ಹೊರತೆಗೆದಾಗ ಗ್ಯಾಸ್ ನಿಂದಾಗಿ ಮುಚ್ಚಳ ಚಿಮ್ಮಲ್ಪಟ್ಟಿತು. ಇದರಿಂದ ಸಹಪಾಠಿಗಳು ಶಿಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಆದರೆ ಶಿಕ್ಷಕರು ಬರುವಷ್ಟರಲ್ಲಿ ಮಗು ಮನೆಗೆ ಪಲಾಯನಗೈದಿದ್ದ. ಮಗುವನ್ನು ಹುಡುಕಿಕೊಂಡು ಶಿಕ್ಷಕರು ಮನೆಗೆ ತೆರಳಿ ಪಾಲಕರಿಗೆ ವಿಷಯ ಮುಟ್ಟಿಸಿದರು. ನಂತರ ಶಾಲಾ ಅಧಿಕಾರಿಗಳು ವಿದ್ಯಾರ್ಥಿಗೆ ಕೌನ್ಸೆಲಿಂಗ್ ನೀಡುವುದಾಗಿ ತಿಳಿಸಿದ್ದಾರೆ. ಅಬಕಾರಿ ಇಲಾಖೆಯಿಂದ ಕೌನ್ಸೆಲಿಂಗ್ ನಡೆಯಲಿದೆ.
ಆದರೆ ವಿದ್ಯಾರ್ಥಿ ಈ ರೀತಿ ಈ ಮೊದಲೂ ಮಾಡಿರುವನೆಂದು ತಿಳಿದುಬಂದಿದೆ. ಈ ಹಿಂದೆಯೂ ಹೀಗೆ ಬೇಕಾಬಿಟ್ಟಿಯಾಗಿ ಮದ್ಯ ತಯಾರಿಸಿದ್ದ. ಮದ್ಯ ತುಂಬಿಸಿದ್ದ ಬಾಟಲಿ ಒಡೆದು ಕೆಳಗೆ ಬಿದ್ದಾಗ ಎಲ್ಲರಿಗೂ ವಿಷಯ ತಿಳಿಯಿತು. ನಂತರ ಮನೆಯವರಿಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ.