HEALTH TIPS

ಉಪ ರಾಷ್ಟ್ರಪತಿ ಚುನಾವಣೆ: ಮಾರ್ಗರೇಟ್ ಆಳ್ವ ವಿಪಕ್ಷ ಅಭ್ಯರ್ಥಿ

              ನವದೆಹಲಿ: ಆಗಸ್ಟ್ 6ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಗೆ(ಗಿiಛಿe ಠಿಡಿesiಜeಟಿಣ eಟeಛಿಣioಟಿ) ವಿಪಕ್ಷಗಳ ಅಭ್ಯರ್ಥಿಯಾಗಿ ಕರ್ನಾಟಕ ಮೂಲದ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಅವರನ್ನು ಆಯ್ಕೆ ಮಾಡಲಾಗಿದೆ.

               ಇಂದು ದೆಹಲಿಯಲ್ಲಿ ವಿಪಕ್ಷಗಳ ಸಭೆ ಮುಕ್ತಾಯ ನಂತರ ಎನ್ ಸಿಪಿ ನಾಯಕ ಶರದ್ ಪವಾರ್ ಮಾರ್ಗರೇಟ್ ಆಳ್ವ  ಅವರ ಹೆಸರನ್ನು ಘೋಷಿಸಿದರು. 

             1942ರ ಏಪ್ರಿಲ್ 14ರಂದು ಮಂಗಳೂರಿನಲ್ಲಿ ಜನಿಸಿದ ಮಾರ್ಗರೇಟ್ ಆಳ್ವಾ ಗೋವಾದ 17 ನೇ ರಾಜ್ಯಪಾಲರಾಗಿ, ಗುಜರಾತ್‌ನ 23 ನೇ ಗವರ್ನರ್, ರಾಜಸ್ಥಾನದ 20 ನೇ ರಾಜ್ಯಪಾಲೆ ಮತ್ತು ಉತ್ತರಾಖಂಡದ 4 ನೇ ರಾಜ್ಯಪಾಲೆಯಾಗಿ ಆಗಸ್ಟ್ 2014ರ ಅಂತ್ಯದವರೆಗೆ ಸೇವೆ ಸಲ್ಲಿಸಿದ್ದಾರೆ. 

               ಅದಕ್ಕೂ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸಂಸದೆಯಾಗಿ ಕೇಂದ್ರ ಸಚಿವೆಯಾಗಿ ಯುಪಿಎ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದರು.ಕಾಂಗ್ರೆಸ್ ನಲ್ಲಿ ಹಿರಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಆಳ್ವಾ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದರು. ಅವರ ಅತ್ತೆ, ವೈಲೆಟ್ ಆಳ್ವ, 1960 ರ ದಶಕದಲ್ಲಿ ರಾಜ್ಯಸಭೆಯ ಉಪಾಧ್ಯಕ್ಷೆಯಾಗಿದ್ದರು.

                    ಮಾರ್ಗರೇಟ್ ಆಳ್ವ ಹರ್ಷ: ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿರುವುದು ಒಂದು ವಿಶೇಷ ಮತ್ತು ಗೌರವವಾಗಿದೆ. ನಾನು ಈ ನಾಮನಿರ್ದೇಶನವನ್ನು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗಾಗಿ ವಿರೋಧ ಪಕ್ಷದ ನಾಯಕರಿಗೆ ಧನ್ಯವಾದಗಳು ಎಂದು ಮಾರ್ಗರೇಟ್ ಆಳ್ವ ಟ್ವೀಟ್ ಮಾಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries