ಬದಿಯಡ್ಕ: ಪೆರಡಾಲ ನವಜೀವನ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಸತತ 26 ವರ್ಷಗಳ ಕಾಲ ಮಿಲಿಟರಿ ಸೇವೆಯಲ್ಲಿ ಹವಿಲ್‍ದಾರ್ ಆಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ಉಮೇಶ್ ಎನ್.ದೊಡ್ಡತೋಟ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಒಬ್ಬ ಸೈನಿಕನ ಸಂದಿಗ್ಧ ಪರಿಸ್ಥಿತಿಯನ್ನು ಮಾರ್ಮಿಕವಾಗಿ ನುಡಿದರು. ದೇಶ ರಕ್ಷಣೆಯ ಕಾರ್ಯದಲ್ಲಿ ಸೈನಿಕರ ಪಾತ್ರದ ಕುರಿತು ಮಕ್ಕಳಿಗೆ ವಿವರಿಸಿದರು. ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿ, ಮುಖ್ಯೋಪಾಧ್ಯಾಯಿನಿ ಮಿನಿ ಟೀಚರ್, ದೈಹಿಕ ಶಿಕ್ಷಕ ಶಿವಪ್ರಸಾದ್ ಶುಭಾಶಂಸನೆಗೈದರು. ಕಾರ್ಗಿಲ್ ವಿಜಯದಲ್ಲಿ ಹುತಾತ್ಮರಾದ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಎನ್.ಸಿ.ಸಿ. ಘಟಕದ ಅಧ್ಯಾಪಕ ಕೃಷ್ಣಯಾದವ್ ಅಗಲ್ಪಾಡಿ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಕಾರ್ತಿಕ ಟೀಚರ್ ವಂದಿಸಿದರು. ಅಧ್ಯಾಪಕ ನಾರಾಯಣ ಆಸ್ರ ಯು. ನಿರೂಪಿಸಿದರು. ಎನ್.ಸಿ.ಸಿ.ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ನವಜೀವನ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ
0
ಜುಲೈ 30, 2022