ನವದೆಹಲಿ :ಕನಿಷ್ಠ ಬೆಂಬಲ ಬೆಲೆ ಕುರಿತು ಕೇಂದ್ರ ಸರಕಾರ ರೂಪಿಸಿದ ಸಮಿತಿಯನ್ನು ರೈತರ ಒಕ್ಕೂಟಗಳ ಮಾತೃ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ ಮಂಗಳವಾರ ತಿರಸ್ಕರಿಸಿದೆ.
ಕೃಷಿ ಕಾಯ್ದೆಯನ್ನು ಬೆಂಬಲಿಸಿದ ''ತಥಾಕಥಿತ ರೈ ನಾಯಕರು'' ಈ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಕನಿಷ್ಠ ಬೆಂಬಲ ಬೆಲೆ ಖಾತರಿ ಕೇವಲ ಅಕ್ಕಿ ಹಾಗೂ ಗೋಧಿಗೆ ಮಾತ್ರವಲ್ಲ ಎಲ್ಲ ಉತ್ಪನ್ನಗಳಿಗೆ ವಿಸ್ತರಿಸಬೇಕು ಎಂದು ರೈತ ನಾಯಕರು ಆಗ್ರಹಿಸುತ್ತಾ ಬಂದಿದ್ದಾರೆ.
ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಂತೆ ಕೇಂದ್ರ ಸರಕಾರ ಈ ಸಮಿತಿ ರೂಪಿಸಲಾಗುವುದು ಎಂದು ಭರವಸೆ ನೀಡಿದ ಎಂಟು ತಿಂಗಳ ಬಳಿಕ ಈ ಕನಿಷ್ಠ ಬೆಂಬಲ ಬೆಲೆ ಸಮಿತಿಯನ್ನು ಸೋಮವಾರ ರೂಪಿಸಿದೆ.
ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಈ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಈ ಸಮಿತಿಯಲ್ಲಿ ನೀತಿ ಆಯೋಗದ ಸದಸ್ಯರಾದ ರಮೇಶ್ ಚಂದ್, ಕೃಷಿ ಆರ್ಥಿಕ ತಜ್ಞರಾದ ಸಿಎಸ್‌ಸಿ ಶೇಖರ್ ಹಾಗೂ ಸುಖ್‌ಪಾಲ್ ಸಿಂಗ್ ಹಾಗೂ ಕೃಷಿ ವೆಚ್ಚ ಹಾಗೂ ಬೆಲೆಯ ಆಯೋಗದ ಸದಸ್ಯ ನವೀನ್ ಪಿ. ಸಿಂಗ್ ಒಳಗೊಳ್ಳಲಿದ್ದಾರೆ.
೨೦೧೯ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭರತ್ ಭೂಷಣ್ ತ್ಯಾಗಿ, ಸಂಯುಕ್ತ ಕಿಸಾನ್ ಮೋರ್ಚಾದ ಮೂವರು ಸದಸ್ಯರು ಹಾಗೂ ಇತರ ರೈತ ಸಂಘಟನೆಗಳ ಐವರು ಸದಸ್ಯರು ಈ ಸಮಿತಿಯ ರೈತ ಪ್ರತಿನಿಧಿಗಳು.
ಇಂಡಿಯನ್ ಫಾರ್ಮರ್ಸ್ ಕೋ-ಆಪರೇಟಿವ್‌ನ ಅಧ್ಯಕ್ಷ ದಿಲೀಪ್ ಸಂಘಾನಿ, ಗ್ರಾಮೀಣ ಭಾರತದ ಸರಕಾರೇತರ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿನೋದ್ ಆನಂದ್, ಕೃಷಿ ವಿಶ್ವವಿದ್ಯಾನಿಲಯಗಳ ಹಿರಿಯ ಸದಸ್ಯರು, ಕೇಂದ್ರ ಸರಕಾರದ ಐವರು ಕಾರ್ಯದರ್ಶಿಗಳು, ಕರ್ನಾಟಕ, ಆಂಧ್ರಪ್ರದೇಶ, ಸಿಕ್ಕಿಂ ಹಾಗೂ ಒಡಿಸಾದ ಮುಖ್ಯ ಕಾರ್ಯದರ್ಶಿಗಳು ಈ ಸಮಿತಿಯ ಭಾಗವಾಗಲಿದ್ದಾರೆ.