ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ವಿವಿಧೆಡೆ ಅಪಾರ ಹಾನಿಯುಂಟಾಗಿದೆ. ಕಾಸರಗೋಡು ಸೇರಿದಂತೆ ರಾಜ್ಯದ 11ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪೊಯಿನಾಚುಇ ನಿವಾಸಿ ತಂಬಾನ್ ಎಂಬವರ ಹೆಂಚಿನ ಮನೆ ಆಂಶಿಕವಾಘಿ ಕುಸಿದು ಹಾನಿಯುಂಟಾಗಿದೆ. ಮುಟ್ಟತ್ತೋಡಿ ಬಾಪಕಿ ನಗರ ಅಬ್‍ಉಲ್ ಶಿಹಾಬ್ ಎಂಬವರ ಮನೆ ಹಿತ್ತಿಲ ಬಾವಿ ಕುಸಿದು ಮಣ್ಣಿನಿಂದಾವೃತವಾಗಿದೆ. ಪೊವ್ವಲ್ ನಿವಾಸಿ ಸಾಬಿರಾ ಮತ್ತು ಆಸ್ಮಾ ಎಂಬವರ ಮನೆಗೋಡೆ ಕುಸಿದು ಹಾನಿಯುಂಟಾಗಿದೆ.
ಚಟ್ಟಂಚಾಲ್ ತೆಕ್ಕಿಲ್ ರಸ್ತೆಯ ಟಾಟಾ ಕೋವಿಡ್ ಆಸ್ಪತ್ರೆ ಸನಿಹ ರಸ್ತೆ ಕುಸಿದು ಅಪಾಯ ಎದುರಿಸುತ್ತಿದೆ. ಈ ಹಾದಿಯಾಗಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಬಿರುಸಿನ ಗಾಳಿಗೆ ಕಾಸರಗೋಡು ಅಗ್ನಿಶಾಮಕ ದಳ ಕಚೇರಿ ಸನಿಹದ ಬೃಹತ್ ಶೆಡ್ಡಿನ ಮೇಲೆ ಬಿದ್ದು ಇಲಾಖೆಯ ಮೂರು ವಾಹನಗಳಿಗೆ ಹಾಣಿ ಸಂಭವಿಸಿದೆ.ಶೆಡ್ಡಿನೊಳಗೆ ನಿಲ್ಲಿಸಿದ್ದ ಆಂಬುಲೆನ್ಸ್ ವಾಹ ಸೇರಿದಂತೆ ಮೂರು ವಾಹನಗಳ ಜಖಂಗೊಂಡಿದೆ.