ನವದೆಹಲಿ: ಪಾಕ್ ಪತ್ರಕರ್ತರ ಜತೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲವೆಂದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿಕೆಗೆ ಬಿಜೆಪಿ ಸಾಕ್ಷ್ಯ ಸಮೇತ ಬಿಡುಗಡೆ ಮಾಡಿದೆ. ಐಎಸ್ಐ ಪರ ಭಾರತದಲ್ಲಿ ಗೂಢಚಾರಿಕೆಗಾಗಿ ಪಾಕ್ ಪತ್ರಕರ್ತರನ್ನು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಹ್ವಾನಿಸಿದ್ದರು ಎಂಬ ಬಿಜೆಪಿ ಆರೋಪವನ್ನು ನಿನ್ನೆಯಷ್ಟೇ ತಳ್ಳಿಹಾಕಿದ್ದರು.
ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಬಿಜೆಪಿ, ಪಾಕ್ ಪತ್ರಕರ್ತರ ಜತೆ ವೇದಿಕೆ ಹಂಚಿಕೊಂಡಿರುವ ಚಿತ್ರವನ್ನು ಬಹಿರಂಗಪಡಿಸಿದೆ. ಉಗ್ರರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇದೇ ಪತ್ರಕರ್ತರ ಜತೆ ಹಮೀದ್ ಅನ್ಸಾರಿ ಕುಳಿತಿರುವ ಚಿತ್ರವನ್ನು ಬಿಜೆಪಿ ವಕ್ತಾರ ಗೌರವ್ ಭಾಟೀಯ ಬಹಿರಂಗಪಡಿಸಿದ್ದಾರೆ.
ಅನ್ಸಾರಿ ಅವರು ಹಲವು ಸೂಕ್ಷ್ಮ ಹಾಗೂ ಅತ್ಯಂತ ಗೌಪ್ಯವಾದ ಮಾಹಿತಿಗಳನ್ನು ತಮ್ಮೊಂದಿಗೆ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಹಂಚಿಕೊಂಡಿದ್ದರು ಎಂಬ ಹೇಳಿಕೆಯನ್ನು ಆಧರಿಸಿ ಬಿಜೆಪಿ ಆರೋಪ ಮಾಡಿತ್ತು. ಇನ್ನು 2010 ಡಿಸೆಂಬರ್ 11ರಂದು ಉಗ್ರರಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮವನ್ನು ತಾವು ಉದ್ಘಾಟನೆ ಮಾಡಿದ್ದೇನೆ ಎಂದು ಸ್ವತಃ ಅನ್ಸಾರಿ ಅವರೇ ಒಪ್ಪಿಕೊಂಡಿದ್ದರು.
ಸದ್ಯ ಈ ವಿವಾದ ದೇಶದ ರಕ್ಷಣಾ ವ್ಯವಸ್ಥೆ ಕುರಿತು ಚರ್ಚೆಗೆ ಗ್ರಾಸವಾಗಿದೆ.
ಇರಾನ್ ನಲ್ಲಿ ಅನ್ಸಾರಿ ಅವರು ದೂತವಾಸ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದೇಶದ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ರಾ ಮಾಜಿ ಕಾರ್ಯಕಾರಿ ಅವರ ಹೇಳಿಕೆಗಳನ್ನೂ ಭಾಟಿಯಾ ಉಲ್ಲೇಖಿಸಿದ್ದರು.