ಪೆರ್ಲ: ಇಲ್ಲಿಯ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಸ್ಥಾಪಕರಾದ ಪರ್ತಜೆ ವೆಂಕಟ್ರಮಣ ಭಟ್ಟರ ಶಿಲಾ ಪ್ರತಿಮೆಗೆ ಹಾರಾರ್ಪಣೆ ಮಾಡುವಿದರೊಂದಿಗೆ ನಡೆಸಲಾಯಿತು. ಇದರಂಗವಾಗಿ ನಡೆದ ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಸಾಹಿತಿ, ನಿವೃತ್ತ ಕನ್ನಡ ಅಧ್ಯಾಪಕ ವಿ ಬಿ ಕುಳಮರ್ವ ಇವರು ಸ್ಥಪಕರ ಬಗ್ಗೆ ಶಾಲಾ ಸ್ಥಾಪನೆಯ ಪ್ರಾರಂಭ ಕಾಲಗಳ ಬಗ್ಗೆ ಮಾತನಾಡಿದರು. ವಿ.ವಿ ಸಂಘದ ಅಧ್ಯಕ್ಷ ಬಿ ಜಿ ರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಆಡಳಿತಮಂಡಳಿ ಪದಾಧಿಕಾರಿಗಳು, ಹಿತೈಷಿಗಳು , ಮುಖ್ಯೋಪಾದ್ಯಾಯರುಗಳು, ಅಧ್ಯಾಪಕ, ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಸ್ವಾಗತಿಸಿ, ಶಿಕ್ಷಕ ಕೇಶವ ಪ್ರಕಾಶ .ಯನ್. ವಂದಿಸಿದರು. ಡಾ. ಸತೀಶ ಪುಣಿಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು.