ಕಾಸರಗೋಡು: ಕಾರು ಡಿಕ್ಕಿಯಾಗಿ ಪತ್ರಕರ್ತ ಕೆ.ಎಂ. ಬಶೀರ್ ಸಾವಿಗೀಡಾದ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಾಮನ್ ಅವರನ್ನು ಆಲಪ್ಪುಳ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕೆಯುಡಬ್ಲ್ಯುಜೆ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರೆಸ್ ಕ್ಲಬ್‍ನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಸಂಘಟನೆ ಉಪಾಧ್ಯಕ್ಷ ನಹಾಸ್ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ರವೀಂದ್ರನ್ ರಾವಣೇಶ್ವರಂ, ಅಬ್ದುಲ್ಲಕುಂಜಿ ಉದುಮ, ಶಫೀಕ್ ನಸ್ರುಲ್ಲಾ, ಉದಿನೂರು ಸುಕುಮಾರನ್, ಕೆ. ವೇಣುಗೋಪಾಲ, ಪುರುಷೋತ್ತಮಪೆರ್ಲ, ನಾರಾಯಣನ್ ಕರಿಚ್ಚೇರಿ, ಕುಞÂಕಣ್ಣನ್, ಡಿಟ್ಟಿ ವರ್ಗೀಸ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಸ್ವಾಗತಿಸಿದರು.
ಆಲಪ್ಪುಳ ಜಿಲ್ಲಾಧಿಕಾರಿ ನೇಮಕಾತಿ: ಪ್ರೆಸ್ ಕ್ಲಬ್ ವತಿಯಿಂದ ಪ್ರತಿಭಟನೆ
0
ಜುಲೈ 31, 2022