ಕಠ್ಮಂಡು: ರಾಷ್ಟ್ರದ ಮೊದಲ ಪೌರತ್ವ ತಿದ್ದುಪಡಿ ಮಸೂದೆಯನ್ನು ನೇಪಾಳದ ಸಂಸತ್ತು ಬುಧವಾರ ಅಂಗೀಕರಿಸಿದೆ.
2020ರಿಂದ ಸಂಸತ್ತಿನಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿತ್ತು. ಆದರೆ ರಾಜಕೀಯ ಪಕ್ಷಗಳು ಒಮ್ಮತದ ನಿರ್ಣಯಕ್ಕೆ ಬರುವಲ್ಲಿ ವಿಫಲಗೊಂಡಿದ್ದವು.
ನೇಪಾಳದ ಗೃಹ ಸಚಿವ ಬಾಲ ಕೃಷ್ಣ ಖಾಂಡ್ ಅವರು ನೇಪಾಳದ ಮೊದಲ 2022ರ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಇದು 2006ರ ಪೌರತ್ವ ಮಸೂದೆಯ ತಿದ್ದುಪಡಿಯಾಗಿದೆ.
ಪೋಷಕರು ನೇಪಾಳದ ನಾಗರಿಕರೇ ಆಗಿದ್ದರೂ ಸಾವಿರಾರು ಮಂದಿ ಪೌರತ್ವದಿಂದ ವಂಚಿತರಾಗಿದ್ದಾರೆ. ಇದರಿಂದ ಶಿಕ್ಷಣ ಸೇರಿದಂತೆ ಮತ್ತಿತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಸೂದೆ ತಿದ್ದುಪಡಿ ಮೂಲಕ ಇಂತವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಾಲ ಕೃಷ್ಣ ಖಾಂಡ್ ಸಂಸತ್ತಿನಲ್ಲಿ ಮನವಿ ಮಾಡಿದರು. ಮೇಲ್ಮನೆಯಲ್ಲಿ ಅಡೆತಡೆಗಳಿಲ್ಲದೆ ಮಸೂದೆ ಅಂಗೀಕಾರವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2018ರಲ್ಲಿ ಅಂದಿನ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸರ್ಕಾರ ಈ ಮಸೂದೆಯನ್ನು ಸಂಸತ್ತಿನಲ್ಲಿ ದಾಖಲಿಸಿತ್ತು.