ನೆಡುಂಬಶ್ಶೇರಿ: ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಮಧ್ಯವಯಸ್ಕನೊಬ್ಬನ ಬ್ಯಾಗ್‍ನಲ್ಲಿ ಏನಿದೆ ಎಂದು ಕೇಳಿದಾಗ ಬಾಂಬ್ ಎಂದು ಉತ್ತರಿಸಿದ್ದರ ಪರಿಣಾಮ ಪೋಲೀಸರು ಆತನನ್ನು ಬಂಧಿಸಿದ್ದಾರೆ. ಮಮ್ಮನ್ ಜೋಸೆಫ್ (63) ಅವರನ್ನು ಪೋಲೀಸರು ಬಂಧಿಸಿದ್ದಾರೆ. ಭದ್ರತಾ ಅಧಿಕಾರಿಯ ಪ್ರಶ್ನೆ ಇಷ್ಟವಾಗದ ಅವರು, ತಮ್ಮ ಬ್ಯಾಗ್ ನಲ್ಲಿ ಬಾಂಬ್ ಇತ್ತು ಎಂದು ತಮಾಷೆಗೆ ಹೇಳಿದ್ದಾರೆ ಎಂದಿರುವರು.
ಇಂದು (ಶನಿವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಮಮ್ಮನ್ ಮತ್ತು ಅವರ ಪತ್ನಿ ಎಮಿರೇಟ್ಸ್ ವಿಮಾನದಲ್ಲಿ ದುಬೈ ಮೂಲಕ ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದರು. ಇದಕ್ಕಾಗಿ ಭದ್ರತಾ ತಪಾಸಣೆಗೆ ಹೋದಾಗ ಭದ್ರತಾ ಅಧಿಕಾರಿ ಬ್ಯಾಗ್‍ನಲ್ಲಿ ಏನಿದೆ ಎಂದು ಪದೇ ಪದೇ ಕೇಳಿದರು. ಇದು ಮಾಮನ್‍ನನ್ನು ಕೆರಳಿಸಿತು. ಆಗ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಪ್ರತಿಕ್ರಿಯಿಸಿದ್ದರು.
ಇದರೊಂದಿಗೆ ವಿಮಾನ ಸಿಬ್ಬಂದಿ ಭದ್ರತಾ ವಿಭಾಗಕ್ಕೆ ಸಂದೇಶ ಕಳುಹಿಸಿದ್ದಾರೆ. ಸಿಐಎಸ್ ಎಫ್ ನೇತೃತ್ವದಲ್ಲಿ ದಂಪತಿಯ ಬ್ಯಾಗ್ ಮತ್ತು ಇತರ ಸರಂಜಾಮುಗಳನ್ನು ಶೋಧಿಸಲಾಯಿತು, ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದಕ್ಕಾಗಿ ಪ್ರಯಾಣಿಸದಂತೆ ನಿಬರ್ಂಧ ವಿಧಿಸಲಾಗಿದೆ. ನಂತರ ಪೋಲೀಸರಿಗೆ ಒಪ್ಪಿಸಿದ್ದಾರೆ. ನೆಡುಂಬಶ್ಶೇರಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ವಿವರವಾದ ತನಿಖೆ ನಡೆಸಲು ಪ್ರಕ್ರಿಯೆ ಆರಂಭಿಸಿದ್ದಾರೆ.