HEALTH TIPS

ನಿಮಗೆ ಗೊತ್ತೇ?: ದೇವರ ಸ್ವಂತ ನಾಡಲ್ಲಿ ಇಂತಹದೊಂದು ಅಸಾಮಾನ್ಯ ದೇವಾಲಯ: ಸಮಾಜ ವಿಜ್ಞಾನ ಶಿಕ್ಷಕನಿಂದ ಭಾರತದ ಪವಿತ್ರ ಸಂವಿಧಾನ ದೇವಾಲಯ ಇಲ್ಲಿದೆ!

                     ತಿರುವನಂತಪುರ: ಕೇರಳವನ್ನು ಸಾಮಾನ್ಯವಾಗಿ ದೇವರ ಸ್ವಂತ ನಾಡು ಎಂದೇ ಹೇಳುವುದು ವಾಡಿಕೆ. ಕಾಸರಗೋಡಿನಿದ ತೊಡಗಿ ತಿರುವನಂತಪುರದ ಕೊನೆಯ ವರೆಗೂ ಅಸಂಖ್ಯ ಆಲಯಗಳು ನಮಗೆ ಕಂಡುಬರುತ್ತದೆ. ಮುಂಜಾನೆ ಸ್ಥಾನಮಾಡಿ ಪಕ್ಕದ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ತಿಲಕವಿಡದೆ ಕೇರಳೀಯರ ದಿನ ಆರಂಭಗೊಳ್ಳದು.

                 ಈ ಮಧ್ಯೆ ಇಲ್ಲೊಬ್ಬರು ವಿಶೇಷ ದೇವಾಲಯವೊಂದನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಅದೇನಪ್ಪಾ ಎಂದರೆ.....ಶಿಕ್ಷಕರೊಬ್ಬರು ಭಾರತದ ಸಂವಿಧಾನವನ್ನು ಪೂಜಿಸುವ ದೇವಾಲಯವನ್ನು ನಿರ್ಮಿಸಿರುವುದು ಬಹುತೇಕರಿಗೆ ಗೊತ್ತಿರದು!.  ಸಮಾಜ ವಿಜ್ಞಾನ ಶಿಕ್ಷಕರಾಗಿ ನಿವೃತ್ತರಾದ ತಿರುವನಂತಪುರಂ ಮೂಲದ ಶಿವದಾಸನ್ ಪಿಳ್ಳೈ ಇದರ ಹಿಂದೆ ಇದ್ದಾರೆ. ಇದನ್ನು ಒಂದು ವರ್ಷದ ಹಿಂದೆ ನಿರ್ಮಿಸಲಾಗಿದೆ.

                    ಮೂರು ಸೆಂಟ್ಸ್ ಜಾಗದಲ್ಲಿ ಹರಡಿರುವ ಈ ದೇವಾಲಯದಲ್ಲಿ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಬಿಆರ್ ಅಂಬೇಡ್ಕರ್ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕøತೆ ಮಲಾಲಾ ಯೂಸುಫ್ ಜಾಯ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ದೇವಸ್ಥಾನದ ಗರ್ಭ ಗೃಹದಲ್ಲಿ ಸಂವಿಧಾನದ ಪೀಠಿಕೆಯನ್ನು ಕೆತ್ತಲಾಗಿದೆ.

                ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುವ ಭಕ್ತರು ಹೆಚ್ಚಿನ ಭಾಗ ವಿದ್ಯಾರ್ಥಿಗಳು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನೂ ಮಾಡಲಾಗುತ್ತದೆ. ಸಂವಿಧಾನವೇ ಈ ಮನೆಯ ಅಭ್ಯುದಯ ಎಂಬ ಏಬಲ್ ನ್ನು ಆಗಿಸಿದ ಪ್ರತಿಯೊಬ್ಬರಿಗೂ ನೀಡಲಾಗುತ್ತದೆ.

                  ಶಿವದಾಸನ್ ಪಿಳ್ಳೆಯವರು ತಮ್ಮ ಆರಾಧ್ಯ ದೈವ ಸಂವಿಧಾನ ಮತ್ತು ಅದನ್ನು ಪೂಜಿಸುವುದಾಗಿ ಹೇಳುತ್ತಾರೆ. ಸಂವಿಧಾನವೇ ದೇಶದ ಅಡಿಪಾಯ. ಇದು ಸಹೋದರತ್ವ ಮತ್ತು ವೈವಿಧ್ಯತೆಯ ಮೂಲವಾಗಿದೆ ಎಂದು ಪಿಳ್ಳೈ ಹೇಳುತ್ತಾರೆ. ದೈವಿಕ ಸಂವಿಧಾನವನ್ನು ಪೂಜಿಸಲು ಮತ್ತು ಅದರ ಮೌಲ್ಯಗಳನ್ನು ಪೋಷಿಸಲು 'ಸಂವಿಧಾನ ಮಂದಿರ'ವನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿರುವರು.

                   ಹೊಸ ಪೀಳಿಗೆಗೆ ಭಾರತೀಯ ಸಂವಿಧಾನದ ಬಗ್ಗೆ ತಿಳಿದಿಲ್ಲ. ಮಕ್ಕಳ ಪಾಲಿಗೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಗಳು ಕೇವಲ ರಜಾ ದಿನಗಳು ಎಂದು ಅಭಿಪ್ರಾಯಪಟ್ಟರು. ಸಮಾಜ ಶಿಕ್ಷಕರಾಗಿದ್ದ ಅವರು ಸಂವಿಧಾನವನ್ನು ಸ್ಪಷ್ಟಪಡಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಸಾಂವಿಧಾನಿಕ ಮೌಲ್ಯಗಳನ್ನು ಕಲಿಸಿ ಯುವಜನರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದರು. ಸಂವಿಧಾನವನ್ನು ಧರ್ಮ ಗ್ರಂಥಗಳಿಗೆ ಹೋಲಿಸಿದ ಅವರು, ಭಾರತವು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries