ಕೊಚ್ಚಿ: ಇರುಂಪನಂನಲ್ಲಿ ಕಸದ ರಾಶಿಯಲ್ಲಿ ರಾಷ್ಟ್ರಧ್ವಜ ಪತ್ತೆಯಾದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಕಿಷ್ಕಣಾಂಬಲಂ ಮೂಲದ ಶಮೀರ್, ಇಡುಕ್ಕಿ ಮೂಲದ ಮಣಿ ಭಾಸ್ಕರ್ ಮತ್ತು ತೊಪ್ಪುಂಪಾಡಿ ನಿವಾಸಿ ಸಾಜರ್ ಬಂಧಿತ ಆರೋಪಿಗಳು. ಆರೋಪಿಗಳನ್ನು ತ್ರಿಪುಣಿತುರ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಎರಡು ದಿನಗಳ ಹಿಂದೆ ಕಸದ ರಾಶಿಯಲ್ಲಿ ರಾಷ್ಟ್ರಧ್ವಜ ಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆಯ ಕಸದ ಜತೆಗೆ ರಾಷ್ಟ್ರಧ್ವಜಗಳು ಎಸೆದಿರುವುದು ಕಂಡು ಬಂದಿತ್ತು.
ನಂತರ ಪೆÇಲೀಸರಿಗೆ ಮಾಹಿತಿ ನೀಡಲಾಯಿತು.ಕಸದೊಂದಿಗೆ ಏಳಕ್ಕೂ ಹೆಚ್ಚು ರಾಷ್ಟ್ರಧ್ವಜಗಳು ಪತ್ತೆಯಾಗಿವೆ. ಇದಾದ ಬಳಿಕ ಹಿಲ್ ಪ್ಯಾಲೇಸ್ ಪೋಲೀಸರು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೋಲೀಸ್ ತಂಡದ ಅಧಿಕಾರಿ ಟಿ.ಕೆ.ಅಮಲ್ ಗೌರವಪೂರ್ವಕವಾಗಿ ಧ್ವಜವಂದನೆ ಸಲ್ಲಿಸಿ ಕೊಂಡೊಯ್ದ ದೃಶ್ಯಾವಳಿಗಳು ವೈರಲ್ ಆಗಿದ್ದವು .