HEALTH TIPS

ಸಮರಸ ಯೋಜನೆಯ ಉಪಕಟ್ಟಡ ಪ್ರವೇಶೋತ್ಸವ

                     ಮುಳ್ಳೇರಿಯ: ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಸಮರಸ ಟ್ರಸ್ಟಿನ ಉಪಕಟ್ಟಡ ಪ್ರವೇಶೋತ್ಸವವು ಶುಕ್ರವಾರ ಮುಳ್ಳೇರಿಯಾ ಸಮೀಪ  "ಸಮರಸ"ದಲ್ಲಿ ಪ್ರಾತಃಕಾಲ 7.30ರ ಸುಮುಹೂರ್ತದಲ್ಲಿ ಜರುಗಿತು. ಇದರ ಅಂಗವಾಗಿ 48 ನಾಳಿಕೇರ ಗಣಪತಿ ಹವನ ಸ್ಥಳೀಯ ವಲಯ ವೈದಿಕ ಪ್ರಧಾನರಾದ ವೇ.ಮೂ.ಶ್ಯಾಮ ಭಟ್ಟ ಪಯ ಇವರ ನೇತೃತ್ವದಲ್ಲಿ ಜರಗಿತು.

              ಕಾರ್ಯಕ್ರಮದಲ್ಲಿ  ಸಮರಸ ಟ್ರಸ್ಟ್ ನ ಅಧ್ಯಕ್ಷ  ಡಾ.ವಿ.ವಿ.ರಮಣ ಮುಳ್ಳೇರಿಯಾ, ಶಾಸನ ತಂತ್ರದ ಪದಾಧಿಕಾರಿಗಳಾದ ಕೆ.ಯನ್ ಭಟ್ ಬೆಳ್ಳಿಗೆ, ಹಾರಕೆರೆ ನಾರಾಯಣ ಭಟ್, ನವನೀತಪ್ರೀಯ ಕೈಪ್ಪಂಗಳ, ಮುಳ್ಳೇರಿಯಾ ಮಂಡಲಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಮಂಡಲ ಗುರಿಕ್ಕಾರÀ ಸತ್ಯನಾರಾಯಣ ಭಟ್ ಮೊಗ್ರ, ಶಿಷ್ಯಮಾಧ್ಯಮ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ, ಮಂಡಲ ಮಾತೃ ಪ್ರಧಾನೆ ಗೀತಾ ಅನಘಾ, ಸಮರಸ ಟ್ರಸ್ಟ್ ನ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ, ಚಂದ್ರಗಿರಿ ವಲಯಾಧ್ಯಕ್ಷ  ಸುಬ್ರಹ್ಮಣ್ಯ ಭಟ್ ಮೀನಗದ್ದೆ, ವಲಯ ಕಾರ್ಯದರ್ಶಿ ಗಣೇಶ್ ಕುಂಜತ್ತೋಡಿ ಹಾಗೂ ವಲಯ ಪದಾಧಿಕಾರಿಗಳು,ಹಲವಾರು ಗುರುಬಂಧುಗಳು ಉಪಸ್ಥಿತರಿದ್ದರು.

               ಸಮರಸ ಯೋಜನೆಯ ಬಗ್ಗೆ ಮಂಡಲ ಶಿಷ್ಯಮಾಧ್ಯಮ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ ಸಮಗ್ರ ಮಾಹಿತಿಯನ್ನು ನೀಡಿದರು.

              ಈ ಯೋಜನೆಯು ಮುಂದಿನ ದಿನಗಳಲ್ಲಿ  ವಿಸ್ತಾರವಾಗಿ ಬೆಳೆದು ಶ್ರೀ ಮಠದ ಅಂಗಸಂಸ್ಥೆ "ಸಮರಸ"ವು ಬೃಹತ್ ಸಮುಚ್ಚಯವಾಗಿ  ಬೆಳೆಯಲು ಎಲ್ಲರೂ ಕೈಜೋಡಿಸಕೊಳ್ಳಬೇಕಾಗಿದೆ ಎಂದು ಕರೆನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries